ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆ: ಕಕ್ಯಪದವು ಎಲ್.ಸಿ.ಆರ್ ಪದವಿಪೂರ್ವ ಕಾಲೇಜಿಗೆ ವಾಣಿಜ್ಯ ವಿಭಾಗದಲ್ಲಿ ಶೇ.93.18 ಫಲಿತಾಂಶ

0

ಕಕ್ಯಪದವು: 2023 -24ನೇ ಶೈಕ್ಷಣಿಕ ಸಾಲಿನ ಪದವಿಪೂರ್ವ ವಿಭಾಗದ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಎಲ್.ಸಿ.ಆರ್ ಪ.ಪೂ ಕಾಲೇಜಿನ ವಾಣಿಜ್ಯ ವಿಭಾಗವು ಶೇ.93.18 ಫಲಿತಾಂಶ ಪಡೆದಿರುತ್ತದೆ.

ಪರೀಕ್ಷೆಯಲ್ಲಿ ಹಾಜರಾದ 44 ವಿದ್ಯಾರ್ಥಿಗಳಲ್ಲಿ 41 ವಿದ್ಯಾರ್ಥಿಗಳು ತೇರ್ಗಡೆಗೊಂಡಿರುತ್ತಾರೆ.

ವಿದ್ಯಾರ್ಥಿನಿ ರಶ್ಮಿತಾ 568 ಅಂಕಗಳನ್ನು ಪಡೆದು ಪ್ರಥಮ ಸ್ಥಾನ, ಫಾತಿಮತ್ ಅಝ್ಮಿಯಾ 558 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಹಾಗೂ ಜಿ.ಮುಶ್ರೀಫಾ 556 ಅಂಕಗಳನ್ನು ಪಡೆದು ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

9 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಯಲ್ಲಿ,27 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 4 ಮಂದಿ ದ್ವಿತೀಯ ಶ್ರೇಣಿ, ಒಬ್ಬ ವಿದ್ಯಾರ್ಥಿ ತೃತೀಯ ಸ್ಥಾನವನ್ನು ಪಡೆದು ತೇರ್ಗಡೆಗೊಂಡಿರುತ್ತಾರೆ.

LEAVE A REPLY

Please enter your comment!
Please enter your name here