ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ: ರೂ.3.61 ಕೋಟಿ ನಿವ್ವಳ ಲಾಭ

0

ಬೆಳ್ತಂಗಡಿ : ಶ್ರೀ ಗುರುದೇವ ಸಹಕಾರಿ ಸಂಘವು ಬೆಳ್ತಂಗಡಿ 2023-24ನೇ ಸಾಲಿನಲ್ಲಿ ರೂ.1115.00 ಕೋಟಿ ವಾರ್ಷಿಕ ವ್ಯವಹಾರ ನಡೆಸಿ, ರೂ.3.61 ಕೋಟಿ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷರಾದ ಎನ್ ಪದ್ಮನಾಭ ಮಾಣಿಂಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ 16 ವರ್ಷದಿಂದ ಸಹಕಾರ ಕ್ಷೇತ್ರದಲ್ಲಿ ಅದ್ವೀತಿಯ ಸಾಧನೆಗಳನ್ನು ಮಾಡಿಕೊಂಡು ಬರುತ್ತಿದ್ದು ರಾಜ್ಯದ ಉತ್ತಮ ಸಹಕಾರಿ ಸಂಘ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಶ್ರೀ ಗುರುದೇವ ಸಹಕಾರಿ ಸಂಘವು 2023-24ನೇ ಅರ್ಥಿಕ ವರ್ಷದಲ್ಲಿ 40 ಸಾವಿರಕ್ಕೂ ಮಿಕ್ಕಿ ಸದಸ್ಯರನ್ನು ಒಳಗೊಂಡು 189 ಕೋ. ಠೇವಣಿಯೊಂದಿಗೆ 155 ಕೋಟಿ ಸಾಲವನ್ನು ನೀಡಿ ರೂ.210 ಕೋಟಿ ದುಡಿಯುವ ಬಂಡವಾಳ, ರೂ.1.99 ಕೋಟಿ ಪಾಲು ಬಂಡವಾಳವನ್ನು ಸಂಗ್ರಾಹಿಸಿ ರೂ 41 ಕೋಟಿ ಹೊಡಿಕೆ ಮಾಡಲಾಗಿದೆ.

ಪ್ರಸ್ತುತ ಸಂಘವು 22 ಶಾಖೆಗಳನ್ನು ಹೊಂದಿದ್ದು ಇವುಗಳಲ್ಲಿ 2 ಶಾಖೆಗಳು ಸ್ವಂತ ಮಾಲಿಕತ್ವದಲ್ಲಿರುತ್ತದೆ. ಕೇಂದ್ರ ಕಚೇರಿಗೆ ಬೆಳ್ತಂಗಡಿಯಲ್ಲಿ ನಿವೇಶನವನ್ನು ಖರೀದಿ ಮಾಡಿ ಪ್ರಸ್ತುತ ರೂ.೫ ಕೋಟಿ ವೆಚ್ಚದ ಕೇಂದ್ರ ಕಚೇರಿ ನಿರ್ಮಾಣದ ಕೆಲಸ ಕಾರ್ಯಗಳು ಅಂತಿಮ ಹಂತದಲ್ಲಿದೆ. ಸಂಘವು ತಾಂತ್ರಿಕವಾಗಿ ಬಹಳಷ್ಟು ಅಭಿವೃದ್ದಿಯನ್ನು ಹೊಂದಿ ಎಲ್ಲಾ ಶಾಖೆಗಳನ್ನು ಆನ್‌ಲೈನ್ ಮಾಡಿಸಿ ಈಗಾಗಲೇ ಸ್ವಂತ IFS CODE ನ್ನು ಪಡೆದುಕೊಂಡಿದೆ. ಈ ಮೂಲಕ ಗ್ರಾಹಕರು ತಮ್ಮ ಖಾತೆಯಿಂದ ನೇರವಾಗಿ ಹಣವನ್ನು ವರ್ಗಾವಣೆ ಮಾಡುವ ಸೌಲಭ್ಯವನ್ನು ಸಂಘವು ಪರಿಚಯಿಸಿದೆ, ದೈನಿಕ ಠೇವಣಿ ಸಂಗ್ರಾಹಣೆಯನ್ನು ಮೊಬೈಲ್ ಆಪ್ ಮೂಲಕ ಈಗಾಗಲೇ ಪರಿಚಯಿಸಿದೆ. ಈ ಬಗ್ಗೆ ಬಳಕೆದಾರರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ.

ರೂ.225 ಕೋಟಿಗೂ ಮಿಕ್ಕಿ ಠೇವಣಿ ಸಂಗ್ರಹದ ಗುರಿ: ಸಂಘವು ಮುಂದಿನ ವರದಿ ವರ್ಷದಲ್ಲಿ ರೂ.225 ಕೋಟಿಗೂ ಮಿಕ್ಕಿ ಠೇವಣಿ ಸಂಗ್ರಹ 190 ಕೋಟಿಗೂ ಮಿಕ್ಕಿ ಸಾಲವನ್ನು ನೀಡುವ ಯೋಜನೆ ಹಮ್ಮಿಕೊಂಡಿದೆ ಹಾಗೂ ಕೇಂದ್ರ ಕಚೇರಿಯ ಉದ್ಘಾಟನೆಯನ್ನು ವರದಿ ವರ್ಷದಲ್ಲಿ ನಡೆಸುವುದೆಂದು ತಿರ್ಮಾನಿಸಲಾಗಿದೆ.

ಸಂಘಕ್ಕೆ ಸಂದ ಪ್ರಶಸ್ತಿಗಳು: ಸಂಘವು ರಾಜ್ಯಮಟ್ಟದ ಉತ್ತಮ ಸಹಕಾರ ಸಂಘ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಯುವವಾಹಿನಿ ಸಾಧನ ಶ್ರೇಷ್ಠ ಪ್ರಶಸ್ತಿ, ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಿಂದ ಸತತ ೭ ವರ್ಷಗಳಿಂದ ಸಾಧನ ಪ್ರಶಸ್ತಿ ಪಡೆದುಕೊಂಡು ಯಶಸ್ವಿ ಸಹಕಾರ ಸಂಘವು ಮುನ್ನಡೆದಿದೆ.

ಸಾಮಾಜಿಕ ಚಟುವಟಿಕೆಗಳು: ವಾರ್ಷಿಕವಾಗಿ ಸುಮಾರು ರೂ.8 ಲಕ್ಷಕೂ ಮಿಕ್ಕಿ ವಿಧ್ಯಾನಿಧಿ ನೀಡಲಾಗಿರುತ್ತದೆ. ಪ್ರತಿಭಾನ್ವಿತ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ದತ್ತು ಪಡೆದುಕೊಂಡು ವಿದ್ಯಾರ್ಜನೆಯನ್ನು ನೀಡಿ ಪ್ರಸ್ತುತ ಇಬ್ಬರು ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ದೊರಕಿರುವುದು ಸಾರ್ಥಕ ಕ್ಷಣ ಎನಿಸಿದೆ. ವರದಿ ವರ್ಷದಲ್ಲಿ ಸಾಮಾಜಿಕ, ಧಾರ್ಮಿಕ, ಆರ್ಥಿಕ, ಶೈಕ್ಷಣಿಕ, ಕಾರ್ಯಕ್ರಮಗಳಿಗೆ ಸುಮಾರು ರೂ.8 ಲಕ್ಷದಷ್ಟು ಸಾರ್ವಜನಿಕ ನಿಧಿಯನ್ನು ವಿನಿಯೋಗಸಲಾಗಿದೆ.

ಸಂಘದ ಸಾಲಗಾರರು ಮರಣ ಹೊಂದಿದರೆ ಋಣಮುಕ್ತಗೊಳಿಸುವ ಸಂಘದ ವಿನೂತನ ಯೋಜನೆಯಡಿಯಲ್ಲಿ ಒಟ್ಟು 33 ಸಾಲಗಾರರ ರೂ. 24 ಲಕ್ಷಕ್ಕೂ ಮಿಕ್ಕಿ ಮೊತ್ತದ ಸಾಲವನ್ನು ಮುಕ್ತಾಯಗೊಳಿಸಿ ಕುಟುಂಬವನ್ನು ಸಾಲದಿಂದ ಋಣಮುಕ್ತಗೊಳಿಸಲಾಗಿದೆ ಮಾತ್ರವಲ್ಲದೆ ಶಾಶ್ವತವಾಗಿ ಬೆಡ್‌ ರೆಸ್ಟ್‌ನಲ್ಲಿರುವ ಇಬ್ಬರು ಸಾಲಗಾರರ ಸಂಕಷ್ಟಕ್ಕೆ ಸ್ಪಂದಿಸಿ ಪೂರ್ತಿ ಸಾಲವನ್ನು ಮುಕ್ತಾಯಗೊಳಿಸಲಾಗಿದೆ ಇಂತಹ ಇನ್ನು ಸಾಮಾಜಿಕ ಕಾರ್ಯಕ್ರಮ ನಡೆಸುತ್ತಾ ಬಂದಿದೆ.

ಈಗಾಗಲೇ ಸಂಘವು ಮೈಸೂರು ಪ್ರಾಂತ್ಯದ ಕಾರ್ಯವ್ಯಾಪ್ತಿಯನ್ನು ಹೊಂದಿದ್ದು ಎಂಟು ಜಿಲ್ಲೆಗಳಿಗೆ ಶಾಖೆಗಳನ್ನು ವಿಸ್ತರಣೆ ಮಾಡಲು ಸರಕಾರದಿಂದ ಅನುಮತಿ ದೊರಕಿರುತ್ತದೆ.

ಸಂಘದ ಉಪಾಧ್ಯಕ್ಷರಾದ ಭಗೀರಥ ಜಿ, ನಿರ್ದೇಶಕ ಕೆ ವಸಂತ ಬಂಗೇರ, ಸುಜಿತಾ ವಿ ಬಂಗೇರ, ತನುಜಾ ಶೇಖರ, ಸಂಜೀವ ಪೂಜಾರಿ, ಕೆ.ಪಿ,ದಿವಾಕರ, ಜಗದೀಶ್ಚಂದ್ರ ಡಿ ಕೆ, ಚಂದ್ರಶೇಖರ, ಧರ್ಣಪ್ಪ ಪೂಜಾರಿ, ಧರಣೇಂದ್ರ ಕುಮಾರ್, ಗಂಗಾಧರ ಮಿತ್ತಮಾರು, ಆನಂದ ಪೂಜಾರಿ, ಡಾ.ರಾಜರಾಮ್ ಕೆ.ಬಿ, ಜಯವಿಕ್ರಮ ಪಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ದಿ.ಶೇಖರ ಬಂಗೇರರವರು ವರದಿ ವರ್ಷದಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿರುತ್ತಾರೆ.ವಿಶೇಷಾಧಿಕಾರಿ ಮೋನಪ್ಪ ಪೂಜಾರಿ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶ್ವತ್ಥ್ ಕುಮಾರ್ ಮತ್ತು ಶಾಖಾ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ವರ್ಗ ಸೇರಿ ಒಟ್ಟು 85 ಮಂದಿ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here