ಮದ್ದಡ್ಕ ತಾಯಿ ಪಿಲಿಚಾಮುಂಡಿ ದೈವದ ವರ್ಷಾವದಿ ನೇಮೋತ್ಸವ

0

ಕುವೆಟ್ಟು: ಮದ್ದಡ್ಕ ಚಂದ್ರಮಾನ ಯಗಾದಿಯಂದು ಎ.9ರಂದು ತಾಯಿ ಪಿಲಿಚಾಮುಂಡಿ ದೈವದ ವರ್ಷಾವದಿ ನೇಮೋತ್ಸವ ವಿಜ್ರಂಭಣೆಯಿಂದ ಜರಗಿತು.

ಸಂಜೆ ಮಠ ಮನೆಯಿಂದ ದೈವದ ಬಂಡಾರ ಸುಡು ಮದ್ದಿನ ಪ್ರದರ್ಶದೊಂದಿಗೆ ಮೆರವಣಿಗೆ ಬಂದು ಭಕ್ತರಿಗೆ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ತದ ನಂತರ ದೈವದ ನೇಮೋತ್ಸವ ಜರಗಿತು.

ರಘುರಾಮ ಭಟ್ ಅಸ್ರಣ್ಣರು ಮಠ ಮನೆ, ಶ್ರೀನಿವಾಸ ಅಮ್ಮುಣ್ಣಾಯ ಅಸ್ರಣ್ಣರು ಮೂಡು ಮನೆ, ಮೋಹನ ಭಟ್ ಮೈರಾರು ಆನುವಂಶಿಕ ಆಡಳಿತ ಮೋಕ್ತೇಸರರು, ಭಕ್ತಾಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here