ಉಜಿರೆ: ಎಸ್.ಡಿ.ಎಮ್ ಆಂ.ಮಾ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಕ್ರೀಡಾ ಬೇಸಿಗೆ ಶಿಬಿರಕ್ಕೆ ಚಾಲನೆ

0

ಉಜಿರೆ: ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಎ.2 ರಿಂದ 14ರವರೆಗೆ ನಡೆಯಲಿರುವ ಕ್ರೀಡಾ ಬೇಸಿಗೆ ಶಿಬಿರದ ಉದ್ಘಾಟನೆ ನಡೆಯಿತು.

ಆಯಾ ಕ್ಷೇತ್ರದಲ್ಲಿ ಪರಿಣತಿ ಹೊಂದಿ, ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿರುವ ತರಬೇತುದಾರರಾದ ಅತ್ಲೇಟಿಕ್ಸ್ ರಾಜಮ್ಮ, ಈಜು ತರಬೇತಿ ಚರಣ್, ಚೆಸ್ ಕು.ಸಿರಿ ಶರ್ಮ, ತ್ರೋಬಾಲ್ ಗಿರೀಶ್, ಹ್ಯಾಂಡ್ ಬಾಲ್ ಸುದೀನ ಪೂಜಾರಿ, ವಾಲಿಬಾಲ್ ಗಣೇಶ್ ಇವರು ಶಿಬಿರದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಹ ಶಿಕ್ಷಕಿ ಶಾಂಟಿ ಜಾರ್ಜ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಶಿಕ್ಷಕಿ ಶಾಂಟಿ ಜಾರ್ಜ್ ಸ್ವಾಗತಿಸಿ, ಶಿಕ್ಷಕಿ ಸುಜನ ವಾಲ್ತಾಜೆ ನಿರೂಪಿಸಿ,  ವಿದ್ಯಾರ್ಥಿನಿ ಲಾವಣ್ಯ ವಂದಿಸಿದರು.

LEAVE A REPLY

Please enter your comment!
Please enter your name here