ಸುಲ್ಕೇರಿಮೊಗ್ರು: ಪುರುಷರ ಬಳಗ ವತಿಯಿಂದ ರಾಶಿ ಪೂಜೆ ಮಾ.30 ರಂದು ಸುಲ್ಕೇರಿಮೊಗ್ರು ಗರಡಿ ವಠಾರದಲ್ಲಿ ರಾಶಿ ಪೂಜೆಯು ಭಕ್ತಿ ಶ್ರದ್ಧೆಯಿಂದ ವಿಜೃಂಭಣೆಯಿಂದ ಜರಗಿತು.
ಸುಗ್ಗಿ ಹುಣ್ಣಿಮೆ ದಿನ ಮೂರು ದಿನಗಳ ಕಾಲ ವಿವಿಧ ವೇಷ ಧರಿಸಿ ಗ್ರಾಮದಲ್ಲಿ ಮನೆ ಮನೆಗೆ ಭೇಟಿ ನೀಡಿ ಕದ್ರಿ ದೇವಸ್ಥಾನದಿಂದ ತೀರ್ಥ ಪ್ರಸಾದ ತಂದು ರಾಶಿ ಪೂಜೆ ನೆರವೇರಿಸಿದರು.ಇದೇ ಸಂದರ್ಭದಲ್ಲಿ ಹಿರಿಯ ವೇಷಧಾರಿಗಳಾದ ರಾಮಣ್ಣ ಮೂಲ್ಯ ಅಂಬಡೆದಡಿ ಮತ್ತು ಓಬಯ್ಯ ದೇವಾಡಿಗ ಇವರಿಗೆ ಸನ್ಮಾನ ಮಾಡಲಾಯಿತು ಹಾಗೂ ಉಚಿತ ಡೋಲು ಸೇವೆ ಸಲ್ಲಿಸಿದ ಪ್ರಸಾದ್ ದಾಯಿಗುಡ್ಡೆ ಇವರನ್ನು ಗೌರವಿಸಲಾಯಿತು.
ಸಂದೀಪ್ ಪಟ್ಲ ನೇತೃತ್ವದಲ್ಲಿ ನಡೆದ ಈ ರಾಶಿ ಪೂಜೆಯಲ್ಲಿ ಊರ ಹಾಗೂ ಪರವೂರ ನೂರಾರು ಭಕ್ತರು ಭಾಗವಹಿಸಿ ದೇವರ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಎಂ.ಗಂಗಾಧರ ಮಿತ್ತಮಾರು, ಸೋಮನಾಥ ಬಂಗೇರ ವರ್ಷಾಳೆ, ಗುರುವಪ್ಪ ಪೂಜಾರಿ ಪಟ್ಲ, ರಾಮಪ್ಪ ಸಣ್ಣಪಟ್ಲ, ನಾರಾಯಣ ಪರಂಟ್ಯಾಲ, ಪುರಂದರ ಪಡುಬೈಲು, ಅಶೋಕ ಕಾಡಂಗೆ, ಅಳದಂಗಡಿ ಸಿಎ ಬ್ಯಾಂಕ್ ಉಪಾಧ್ಯಕ್ಷ ಜನಾರ್ಧನ ಕೊಡಂಗೆ, ರವಿ ಸಾಲಿಯಾನ್, ನಂದನ್, ಗಣೇಶ್ ಕಾಡಂಗೆ, ರಾಜೇಂದ್ರ ಸಾಲಿಯಾನ್, ಧರ್ಣಪ್ಪ, ಪ್ರಮೋದ್, ವಸಂತ ಅಂಚನ್, ಆನಂದ ಅಂಚನ್, ಸಂಕೇತ್ ವರ್ಷಾಳೆ, ಕಿಶೋರ್ , ಸತೀಶ್, ರಮೇಶ್, ಗೇತನ್, ಶಿವಪ್ಪ ಕೊಲ್ಲಂಗೆ ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು.