

ಪದ್ಮುಂಜ: ಕಣಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪದ್ಮುಂಜದಿಂದ ಪುದ್ದೊಟ್ಟಿಗೆ ಹೋಗುವ ಡಾಮರು ರಸ್ತೆಗೆ ಪುದ್ದೊಟ್ಟು ಎಂಬಲ್ಲಿ ಗೀತಾ ಶೆಟ್ಟಿ ಎಂಬವರು ಮಣ್ಣು ಹಾಕಿ ರಸ್ತೆ ಚರಂಡಿಯನ್ನು ಮುಚ್ಚಿ ಸಮತಟ್ಟು ಮಾಡಿ ಡಾಮರು ರಸ್ತೆಯನ್ನು ಅತಿಕ್ರಮಣ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಕಣಿಯೂರು ಗ್ರಾಮ ಪಂಚಾಯಿತಿ ಹಾಗೂ ಬೆಳ್ತಂಗಡಿ ತಹಶೀಲ್ದಾರರಿಗೆ ದೂರು ನೀಡಿದ್ದಾರೆ.
ದೂರು ನೀಡಿದ ಕಾರಣದಿಂದ ಆಕ್ರೋಶಿತರಾದ ಗೀತಾ ಶೆಟ್ಟಿ ತಮಗೆ ಬೆದರಿಕೆ ಹಾಕಿದ್ದಾರೆ ಎಂದು ಗ್ರಾಮಸ್ಥರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿರುವುದು ತಿಳಿದು ಬಂದಿದೆ.