ಶ್ರೀ ಧ.ಮಂ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಸಂದರ್ಶನವನ್ನು ಎದುರಿಸುವುದು ಹೇಗೆ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ- ಆತ್ಮವಿಶ್ವಾಸದಿಂದ ಸಂದರ್ಶನವನ್ನು ಎದುರಿಸಿ: ಬಿ.ಸೋಮಶೇಖರ ಶೆಟ್ಟಿ

0

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಕರ ತರಬೇತಿ (ಡಿ.ಇಎ ಲ್.ಇಡಿ) ಸಂಸ್ಥೆಯಲ್ಲಿ ಸಂದರ್ಶನವನ್ನು ಎದುರಿಸುವುದು ಹೇಗೆ? ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಮಾ.25ರಂದು ಹಮ್ಮಿಕೊಳ್ಳಲಾಗಿತ್ತು.

ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮ ಪಾಲನ ಅಧಿಕಾರಿ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಬಿ.ಸೋಮಶೇಖರ ಶೆಟ್ಟಿ ಮಾತನಾಡುತ್ತಾ ಸಂದರ್ಶನದ ಮೂಲಕ ಅಭ್ಯರ್ಥಿಯನ್ನು ಮೌಲ್ಯಮಾಪನ ಮಾಡುವಾಗ, ಅವರ ಶೈಕ್ಷಣಿಕ ಹಿನ್ನೆಲೆ ಅಥವಾ ಪದವಿಯ ಆಧಾರದ ಮೇಲೆ ಮಾತ್ರವಲ್ಲದೆ ಅವರ ಕೌಶಲ್ಯಗಳು, ಸಂವಹನ ಕಲೆ, ಪ್ರಾಮಾಣಿಕತೆ, ಸಾಮರ್ಥ್ಯಗಳು, ಅವರ ಅನುಭವ ಮತ್ತು ಶೈಕ್ಷಣಿಕ ಹಿನ್ನೆಲೆಯಂತಹ ಪ್ರತಿಭೆಯನ್ನು ಪರೀಕ್ಷಿಸಲಾಗುತ್ತದೆ.

ಪ್ರಸ್ತುತ ಯುಗದಲ್ಲಿ ಜ್ಞಾನ ತಂತ್ರಜ್ಞಾನದ ಬಳಕೆ ಅನಿವಾರ್ಯ ಎಂದು ಹೇಳುತ್ತಾ ತಮ್ಮ ಬದುಕಿನ ಸಂದರ್ಶನದ ಸಂದರ್ಭದಲ್ಲಾದ ಹಲವು ಅನುಭವಾತ್ಮಕ ಘಟನೆಗಳ ಬಗ್ಗೆ ತಿಳಿಸಿ ಆತ್ಮವಿಶ್ವಾಸದಿಂದ ಸಂದರ್ಶನವನ್ನು ಎದುರಿಸಿ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲ ಸ್ವಾಮಿ ಕೆ.ಎ ವಹಿಸಿ ವೃತ್ತಿ ಜೀವನದಲ್ಲಿ ಸಂದರ್ಶನಕ್ಕೆ ಪೂರಕವಾದ ಕೌಶಲಗಳನ್ನು ಅಳವಡಿಸಿಕೊಳ್ಳಿ ಎಂದು ಹೇಳಿದರು.ಉಪನ್ಯಾಸಕ ಮಂಜು ಆರ್ ಅನುಷಾ ಡಿ.ಜೆ. ಹಾಗೂ ವರ್ಗದವರು, ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

ಪ್ರಶಿಕ್ಷಣಾರ್ಥಿಗಳಾದ ಸುರಕ್ಷ, ಅಂಬಿಕಾ ಪ್ರಾರ್ಥಿಸಿ ನಿಶಾ ಸ್ವಾಗತಿಸಿ, ಅರ್ಚನಾ ವಂದಿಸಿ, ಯತೀಕ್ಷ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here