ಬೆಳ್ತಂಗಡಿ: ಕಳೆದ 3 ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ನೀಡಿ ಗ್ರಾಮೀಣ ಭಾಗದ ಯುವ ಜನತೆಗೆ ದಾರಿ ದೀಪವಾಗಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ವಿದ್ಯಾಮಾತಾ ಅಕಾಡೆಮಿಯ ಮುಕುಟಕ್ಕೆ ಮತ್ತೊಂದು ಯಶಸ್ಸಿನ ಗರಿಮೆ ಲಭಿಸಿದ್ದು, 2024 ನೇ ಸಾಲಿನ ಅಖಿಲ ಭಾರತೀಯ ಸೈನಿಕ ಶಾಲಾ ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದ 4 ವಿದ್ಯಾರ್ಥಿಗಳಲ್ಲಿ 4 ವಿದ್ಯಾರ್ಥಿಗಳು ಕೂಡ ಉತ್ತೀರ್ಣರಾಗಿ ಸಂಸ್ಥೆಯು ಶೇ.100 ಫಲಿತಾಂಶವನ್ನು ದಾಖಲಿಸಿರುತ್ತದೆ.
ಇಲ್ಲಿಯ ವರೆಗೆ ಒಟ್ಟಾರೆ 116 ವಿದ್ಯಾರ್ಥಿಗಳು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನೇಮಕಾತಿಗೊಂಡಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದು, ಇದೀಗ ಕಳೆದ 1ವರ್ಷದಿಂದ ತರಬೇತಿಯನ್ನು ಪಡೆಯುತ್ತಿದ್ದ ವಿದ್ಯಾರ್ಥಿಗಳ ಅವಿರತ ಪ್ರಯತ್ನದಿಂದ ಯಶಸ್ಸು ಲಭಿಸಿದ್ದು, ಮುಂದಕ್ಕೆ ಸೈನಿಕ ಶಾಲಾ ಪ್ರವೇಶ ಪರೀಕ್ಷೆ ಎದುರಿಸುವವರಿಗೆ ದಾರಿ ದೀಪವಾಗಿದ್ದಾರೆ.
2024ನೇ ಸಾಲಿನ ಅಖಿಲ ಭಾರತೀಯ ಸೈನಿಕ ಶಾಲಾ ಪ್ರವೇಶ ಪರೀಕ್ಷೆಯನ್ನು ಪುತ್ತೂರು ತಾಲೂಕಿನ ಕಸಬಾ ನಿವಾಸಿಯಾದ ಚಂದ್ರಶೇಖರ್ ರವರ ಪುತ್ರಿಯಾದ ಯುತಿಕಾ ಸಿ, ಪುತ್ತೂರು ತಾಲೂಕಿನ ಉಪ್ಪಿನಂಗಡಿ ನಿವಾಸಿಯಾದ ವಿಶ್ವನಾಥ ಎ ರವರ ಪುತ್ರ ವಿಸ್ಮಯ್ ಬಿ ವಿ, ಪುತ್ತೂರು ತಾಲೂಕು ತೆಂಕಿಲ ನಿವಾಸಿಯಾದ ಮಂಜುನಾಥ ಎನ್ ರವರ ಪುತ್ರರಾದ ಎಂ ಎಸ್ ನಿಖಿಲ್ ಹಾಗೂ ತನ್ಮಯ್ ಪಿ ಎಂ ರವರು ಪರೀಕ್ಷೆಯನ್ನು ಎದುರಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಏ.21ರಿಂದ ಮೇ.21ರವರೆಗೆ ಸೈನಿಕ ಶಾಲಾ ಪ್ರವೇಶ ಪರೀಕ್ಷೆ, ನವೋದಯ ಸೇರಿದಂತೆ ವಿವಿಧ ವಸತಿ ಶಾಲಾ ಪ್ರವೇಶ ಪರೀಕ್ಷೆ ಹಾಗೂ ಐ ಎ ಎಸ್, ಐ ಪಿ ಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವ ತಯಾರಿ ಮಾಡುವವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪೂರ್ವ ತಯಾರಿ ತರಬೇತಿ ಶಿಬಿರವನ್ನು ವಿದ್ಯಾಮಾತಾ ಅಕಾಡೆಮಿಯು ಆಯೋಜಿಸಿದ್ದು 5ನೇ ತರಗತಿಯಿಂದ ದ್ವಿತೀಯ ಪಿ ಯು ಸಿ ವರೆಗಿನ ವಿದ್ಯಾರ್ಥಿಗಳಿಗೆ ಈ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲು ಮುಕ್ತ ಅವಕಾಶ ಕಲ್ಪಿಸಲಾಗಿದ್ದು.
ಹೆಚ್ಚಿನ ಮಾಹಿತಿಗಾಗಿ: ವಿದ್ಯಾಮಾತಾ ಅಕಾಡೆಮಿ ಪುತ್ತೂರು ಮತ್ತು ಸುಳ್ಯ ವಿದ್ಯಾಮಾತಾ ಶಾಖೆಯನ್ನು ಈ ಕೆಳಗಿನ ಸಂಖ್ಯೆಯ ಮೂಲಕ ಸಂಪರ್ಕಿಸಬಹುದು.
ಕೇಂದ್ರ ಕಛೇರಿ ಪುತ್ತೂರು :9620468869 / 9148935808
ಸುಳ್ಯ ಶಾಖೆ: 9448527606