

ಕೊಕ್ಕಡ: ಹಳ್ಳಿಂಗೇರಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ “ಕ್ಷೀರಾಬ್ದಿ”ಯ ಉದ್ಘಾಟನೆಯು ಮಾ.22ರಂದು ನಡೆಯಲಿದೆ.
2015ರಲ್ಲಿ ಆರಂಭಗೊಂಡ ಈ ಸಂಘವು ಸದ್ಯ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ.ಸಂಘದ ಸ್ಥಾಪಕ ಅಧ್ಯಕ್ಷರಾಗಿ ಹೇಮಾವತಿ ಸಂಘವನ್ನು ಮುನ್ನಡೆಸಿದರು.
ಪ್ರಸ್ತುತ ಶ್ವೇತಾ ಹೆಚ್.ಕೆ ಅಧ್ಯಕ್ಷರಾಗಿದ್ದಾರೆ.ಆರಂಭದಲ್ಲಿ 150 ಲೀಟರ್ ಹಾಲು ಸಂಗ್ರಹಗೊಳ್ಳುತ್ತಿದ್ದ ಸಂಸ್ಥೆಯಲ್ಲಿ ಸದ್ಯ ದಿನವೊಂದರ ಸುಮಾರು 600 ಲೀಟರ್ ಹಾಲು ಸಂಗ್ರಹಗೊಳ್ಳುತ್ತಿದೆ.180ಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ಸಂಘವು ಕೃಷಿಗೆ ಪೂರಕವಾಗಿರುವ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ರೈತರನ್ನು ಪ್ರೋತ್ಸಾಹಿಸುತ್ತಿದೆ.
ಕಟ್ಟಡ ನಿರ್ಮಾಣದ ಉಸ್ತುವಾರಿಯನ್ನು ಕೆ.ವಿ ಭಟ್ ಅವರ ಗೌರವಾಧ್ಯಕ್ಷತೆಯಲ್ಲಿನ ಸಮಿತಿ ನಿರ್ವಹಿಸಿದೆ.ಸಮಿತಿಯ ಅಧ್ಯಕ್ಷರಾಗಿ ರಾಮಣ್ಣ ಗೌಡ ಕೇಚೋಡಿ, ಉಪಾಧ್ಯಕ್ಷರಾಗಿ ಜಯಂತ ಗೌಡ ಅಡೀಲು ಹಾಗೂ ಕಾರ್ಯದರ್ಶಿಯಾಗಿ ಹರಿಪ್ರಸಾದ್ ಕೆದಿಲಾಯ ಕಾರ್ಯನಿರ್ವಹಿಸಿದರು.
ನಿವೃತ್ತ ಶಿಕ್ಷಕ ಕುಂಞಪ್ಪ ಗೌಡ ಕಟ್ಟಡದ ನಿರ್ಮಾಣದಲ್ಲಿ ಮಾರ್ಗದರ್ಶನ ನೀಡಿರುತ್ತಾರೆ.ನೆಲ್ಯಾಡಿಯ ಬಿಲ್ಡ್ ಟೆಕ್ ಸಂಸ್ಥೆಯ ಇಂಜಿನಿಯರ್ ಪ್ರಶಾಂತ್ ಪಿ.ವಿ ಕಟ್ಟಡ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.
ದಕ್ಷಿಣ ಕನ್ನಡ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ರಾಜೇಶ್ ಜಿ ಕಾಮತ್, ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಸಿಬ್ಬಂದಿಗಳ ಮತ್ತು ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ನೂತನ ಕಟ್ಟಡ ಸುಸಜ್ಜಿತವಾಗಿ ನಿರ್ಮಾಣವಾಗಿದ್ದು ಮಾ.22ರಂದು ಉದ್ಘಾಟನೆಗೊಳ್ಳಲಿದೆ.