ನೆರಿಯ: ಬಾಂಜಾರು ಮಲೆಯಲ್ಲಿ ಶಕ್ತಿವಂದನಾ ಕಾರ್ಯಕ್ರಮ

0

ನೆರಿಯ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ಮಹಿಳಾ ಮೋರ್ಚ ಜಿಲ್ಲಾ ಮಹಿಳಾ ಮೋರ್ಚಾದ ವತಿಯಿಂದ ನೆರಿಯ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಬಾಂಜಾರು ಮಲೆಯಲ್ಲಿ ವಾಸಿಸುವ ಅರಣ್ಯವಾಸಿ ಜನರೊಂದಿಗೆ ಶಕ್ತಿವಂದನಾ ಕಾರ್ಯಕ್ರಮ ಹಾಗೂ ಮೋದಿಜಿ ಯವರ ಯೋಜನೆಗಳ ಬಗ್ಗೆ ಅಲ್ಲಿಯ ಜನರಿಗೆ ಮನವರಿಕೆ ಹಾಗೂ ಅಲ್ಲಿಯ ಮಹಿಳೆಯರಿಗೆ ಮನರಂಜನಾತ್ಮಕ ಆಟೋಟ ಸ್ಪರ್ಧೆಯನ್ನು ಏರ್ಪಡಿಸಲಾಯಿತು.

ಈ ಕಾರ್ಯಕ್ರಮಕ್ಕೆ ಜಿಲ್ಲಾಧ್ಯಕ್ಷರ ಸತೀಶ್ ಕುಂಪಲಾ ಹಾಗೂ ಬೆಳ್ತಂಗಡಿ ಮಂಡಲದ ಅಧ್ಯಕ್ಷ ಶ್ರೀನಿವಾಸ್ ರಾವ್, ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಮಂಜುಳಾ ರಾವ್, ಪ್ರದಾನ ಕಾರ್ಯದರ್ಶಿಗಳಾದ ಸಂಧ್ಯಾ ವೆಂಕಟೇಶ್, ಲಕಿತ ಹಾಗೂ ಪದಾಧಿಕಾರಿಗಳು, ಜಿಲ್ಲಾ ಕಾರ್ಯದರ್ಶಿ ಸೀತಾರಾಮ್ ಬೆಳಾಲು, ಪ್ರದಾನ ಕಾರ್ಯದರ್ಶಿಗಳಾದ ಜಯಾನಂದ ಗೌಡ, ಪ್ರಶಾಂತ್ ಪಾರೆಂಕಿ ಹಾಗೂ ಬೆಳ್ತಂಗಡಿ ಮಹಿಳಾ ಮೋರ್ಚಾದ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ ಬೆಳಾಲು ಹಾಗೂ ಪ್ರದಾನ ಕಾರ್ಯದರ್ಶಿಗಳಾದ ಪೂರ್ಣಿಮಾ ಜಯಂತ್, ತುಳಸಿ ಮಾಲಾಡಿ ಹಾಗೂ ಯುವ ಮೊರ್ಚಾದ ಅಧ್ಯಕ್ಷ ಶಶಿರಾಜ್ ಶೆಟ್ಟಿ, ಪದಾಧಿಕಾರಿಗಳು, ಚಾರ್ಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾರದ ಚಾರ್ಮಾಡಿ, ಮಹಿಳಾ ಮೊರ್ಚದ ಉಪಾಧ್ಯಕ್ಷೆ ಶಾರದ ಕಳೆಂಜ ಭಾಗವಹಿಸಿದರು.

LEAVE A REPLY

Please enter your comment!
Please enter your name here