ಕಳೆಂಜ: ಜನನಿ ಗ್ರಾಮ ಮಟ್ಟದ ಮಹಿಳಾ ಒಕ್ಕೂಟ ಮತ್ತು ಗ್ರಾ.ಪಂ ಇದರ ಸಮ್ಮಿಲನದಲ್ಲಿ ಮಹಿಳಾ ದಿನಾಚರಣೆ

0

ಕಳೆಂಜ: ಜನನಿ ಗ್ರಾಮ ಮಟ್ಟದ ಮಹಿಳಾ ಒಕ್ಕೂಟ ಮತ್ತು ಗ್ರಾಮ ಪಂಚಾಯತ್ ಇದರ ಸಮ್ಮಿಲನದಲ್ಲಿ ಮಹಿಳಾ ದಿನಾಚರಣೆ ಆಚರಿಸಲಾಯಿತು.

ಸಭೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯೆ ಮಮತಾ ಎ.ಕೆ ಸಭೆಯ ಅಧ್ಯಕ್ಷತೆಯನ್ನು ವಹಿಸಿದರು.

ಜನನಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸಾವಿತ್ರಿ ರೈ, ಸಂಪನ್ಮೂಲ ವ್ಯಕ್ತಿ ಉಷಾ ಕಾಮತ್, ಕಿರಿಯ ಆರೋಗ್ಯ ಸಹಾಯಕಿ ನಿಖಿತಾ ಮತ್ತು ಸಂಜೀವಿನಿ ಒಕ್ಕೂಟದ ವಲಯ ಮೇಲ್ವಿಚಾರಕಿ ವೀಣಾ, ಗ್ರಾ.ಪಂ ಉಪಾಧ್ಯಕ್ಷ ಮಂಜನಾಥ ಹಾಗೂ ಕಾರ್ಯದರ್ಶಿ ಹೊನ್ನಪ್ಪ ಗೌಡ ಉಪಸ್ಥಿತರಿದ್ದರು.

ಜಯಶ್ರೀ ನಿರೂಪಿಸಿ ಹಾಗೂ ಸ್ವಾಗತವನ್ನು ಜನನಿ ಸಂಜೀವಿನಿ ಒಕ್ಕೂಟದ MBK ವಿಮಲರವರು ಮಾಡಿದರು.ಪ್ರಾರ್ಥನೆಯನ್ನು ಜಯಶ್ರೀ ಜನನಿ ಸಂಜೀವಿನಿ ಕಾರ್ಯದರ್ಶಿ ಮಾಡಿದರು.ಸದಸ್ಯರಿಗೆ ಆಟೋಟ ಸ್ಪರ್ದೆಯನ್ನು ನಡೆಸಲಾಯಿತು.

ನಾರಿಶಕ್ತಿ ಸನ್ಮಾನವನ್ನು ಸಂಘದ 3 ಸದಸ್ಯರಿಗೆ ಮಾಡಲಾಯಿತು.ದಿವ್ಯಜೋತಿ ಸ್ತ್ರಿ ಶಕ್ತಿಯ ಭವಾನಿ ಇವರಿಗೆ ಕೋಳಿ ಸಾಕಣಿಗೆ ಶ್ರೀ ದುರ್ಗಾ ಸಂಜೀವಿನಿ ಸದಸ್ಯೆಯಾದ ಕವಿತಾ ಇವರಿಗೆ ಆಡು ಸಾಕಣಿಕೆ ಹಾಗೂ ಸುಜ್ಞಾನ ವಿಶೇಷ ಚೇತನರ ಸ್ವ ಸಹಾಯ ಸಂಘದ ಸದಸ್ಯ ಸೌರಭ ಇವರಿಗೆ ಸನ್ಮಾನಿಸಲಾಯಿತು.

ಗೀತಾರವರ ಧನ್ಯವಾದದೊಂದಿಗೆ ಸಭೆಯನ್ನು ಕೊನೆಗೊಳಿಸಲಾಯಿತು.

ಸುಶೀಲ ಮಾ.ತಾ.ಸ, ಗೀತಾ ಶಾರದ ಮಾ.ಗ್ರಾ.ಪಂ ಅಧ್ಯಕ್ಷರು, ಗ್ರಾಮ ಪಂಚಾಯತ್ ಸದಸ್ಯರುಗಳು ಒಕ್ಕೂಟದ ಪದಾಧಿಕಾರಿಗಳು, LCRP ಗಳು, ಕೃಷಿ ಸಖಿ, ಪಶುಸಖಿ, ಮಹಿಳಾ ಸಂಘದ ಸದಸ್ಯರುಗಳು, ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ವಿಮಲ ಎನ್ ಇವರು ಭಾಗವಹಿಸಿದರು.

LEAVE A REPLY

Please enter your comment!
Please enter your name here