ಪೆರ್ಲ ಬೈಪಾಡಿ ಸ.ಪ್ರೌ ಶಾಲೆ ಮುಖ್ಯ ಶಿಕ್ಷಕರಾಗಿ ಭಡ್ತಿಗೊಂಡ ಕೊರಗಪ್ಪ ಟಿ ರವರಿಗೆ ಸನ್ಮಾನ

0

ಬಂದಾರು: ಪೆರ್ಲ ಬೈಪಾಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸುಮಾರು 23 ವರ್ಷ ಗಣಿತ ಶಿಕ್ಷಕರಾಗಿ, ಕೆಲವು ಸಮಯ ಪ್ರಭಾರ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಕೊರಗಪ್ಪ ಇವರು ಪದೋನ್ನತಿಗೊಂಡು ಸರ್ಕಾರಿ ಪ್ರೌಢ ಶಾಲೆ ಹಳೇಪೇಟೆ ಉಜಿರೆಗೆ ವರ್ಗಾವಣೆಗೊಂಡಿರುವ ಪ್ರಯುಕ್ತ ಅವರಿಗೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಮತ್ತು ಊರವರ ವತಿಯಿಂದ ಬೀಳ್ಕೊಡುಗೆ ಸಮಾರಂಭವು ಮಾ.9ರಂದು ನಡೆಯಿತು.

ಈ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಮಹಾಬಲ ಗೌಡ ವಹಿಸಿದ್ದು, ಕೊರಗಪ್ಪರು ಗಣಿತ ವಿಷಯವನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಬೋಧಿಸಿ, ಮಕ್ಕಳಿಗೆ ಅಚ್ಚು ಮೆಚ್ಚಿನ ಶಿಕ್ಷಕರಾಗಿದ್ದರು ಎಂದು ಹೇಳಿದರು.

ಶಾಲಾ ಸ್ಥಾಪನೆಗೆ ಕಾರಣ ಕರ್ತರಾದ ಕೊಂಕನೊಟ್ಟು ದೇಜಪ್ಪ ಗೌಡ , ಹಿರಿಯರಾದ ಹೊನ್ನಪ್ಪ ಗೌಡ, ಗ್ರಾಮ ಪಂಚಾಯತಿ ಸದಸ್ಯೆ ಅನಿತಾ, ಕಂಚರೊಟ್ಟು ಡೀಕಯ್ಯ ಗೌಡ, ಎಸ್.ಡಿ.ಎಂ.ಸಿ.ಯ ಸದಸ್ಯರು ಉಪಸ್ಥಿತರಿದ್ದರು.ಶೇಖರ್ N., ಮಹೇಶ್ ನಿಲಜಿ, ವಿವೇಕಾನಂದ ಗೌಡ, ಮಹೇಶ್ ಎ.ಕೊರಗಪ್ಪರ ಸೇವೆಯನ್ನು ಸ್ಮರಸಿ ಅಭಿನಂದನೆ ಸಲ್ಲಿಸಿದರು.

ಹಳೆ ವಿದ್ಯಾರ್ಥಿಗಳಾದ ಸುರಕ್ಷಿತ, ನವೀನ್ ಪ್ರಕಾಶ್, ವಿದ್ಯಾರ್ಥಿಗಳಾದ ಶ್ರದ್ಧಾ, ಪಲ್ಲವಿ, ವನ್ಯಶ್ರೀ, ದಿವ್ಯಾ ಗುರುಗಳ ಗುಣಗಾನ ಮಾಡಿದರು.

ಕನ್ನಡ ಶಿಕ್ಷಕಿ ಹೇಮಲತಾ ಅಭಿನಂದನಾ ಪತ್ರ ವಾಚಿಸಿದರು.ಕೊರಗಪ್ಪ ಮತ್ತು ಅವರ ಪತ್ನಿ ತ್ರಿವೇಣಿಯವರನ್ನು ಅಭಿನಂದಿಸಲಾಯಿತು.

ವಿದ್ಯಾರ್ಥಿನಿಯರಾದ ಗಣ್ಯಶ್ರೀ, ರಶ್ಮಿತಾ, ಯಶಸ್ವಿಯವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಬಾಲಕೃಷ್ಣ ಕೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

ಅತಿಥಿ ಶಿಕ್ಷಕಿ ದೀಕ್ಷಾ ವಂದಿಸಿದರು. ವಿಜಯ ಕುಮಾರ್ ಎಂ ಕೊಯ್ಯೂರು, ಕಾರ್ಯಕ್ರಮ ನಿರೂಪಿಸಿದರು.

p>

LEAVE A REPLY

Please enter your comment!
Please enter your name here