ಮಾ.16: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಹಿಳಾ ಉದ್ಯಮಿಗಳ ಕಾರ್ಯಾಗಾರ

0

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಧರ್ಮಸ್ಥಳ ಹಾಗೂ ಸೆಲ್ಕೋ ಫೌಂಡೇಷನ್, ಬೆಂಗಳೂರು‌ ಇವರ ಜಂಟಿ ಆಶ್ರಯದಲ್ಲಿ ಮಹಿಳಾ ಉದ್ಯಮಿಗಳಿಗಾಗಿ “ಸಮೃದ್ಧಿ-ಸಂತೃಪ್ತಿ ಸಬಲೀಕರಣ” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮವು ಮಾ.16ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ಬೆಳಗ್ಗೆ 9:00 ಗಂಟೆಗೆ ಆರಂಭವಾಗಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ವಹಿಸಲಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಎಸ್.‌ಕೆ.ಡಿ.ಆ‌ರ್.ಡಿ.ಪಿ.)ಯ ಜ್ಞಾನ ವಿಕಾಸ ಕಾರ್ಯಕ್ರಮದ ಅಧ್ಯಕ್ಷರಾದ ಡಾ. ಹೇಮಾವತಿ ವಿ.ಹೆಗ್ಗಡೆ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸೆಲ್ಕೋದ ಸಂಸ್ಥಾಪಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ. ಹರೀಶ್‌ ಹಂದೆ, ಸ್ವಾಮಿ ವಿವೇಕಾನಂದ ಯೂತ್‌ ಮೂವ್ಮೆಂಟ್‌ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಸವಿತಾ ಸುಳುಗೋಡು‌, ಎಸ್.‌ಕೆ.ಡಿ.ಆ‌ರ್.ಡಿ.ಪಿ.ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ.ಎಚ್.ಎಲ್‌.ಮಂಜುನಾಥ್‌, ಸೆಲ್ಕೋ ಸೋಲಾರ್‌ ಲೈಟ್‌ ಪ್ರೈವೇಟ್‌ ಲಿಮಿಟೆಡ್‌ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಮೋಹನ್‌ ಭಾಸ್ಕರ್‌ ಹೆಗಡೆ, ಎಸ್.‌ಕೆ.ಡಿ.ಆ‌ರ್.ಡಿ.ಪಿ.ಯ ಮುಖ್ಯ ನಿರ್ವಹಣಾಧಿಕಾರಿಗಳಾದ ಅನಿಲ್‌ ಕುಮಾರ್‌ ಎಸ್.ಎಲ್.‌, ಭಾಗವಹಿಸುವರು.

ಕಾರ್ಯಕ್ರಮದಲ್ಲಿ, ಗ್ರಾಮೀಣ ಪ್ರದೇಶಗಳ ದೃಷ್ಟಿಯಲ್ಲಿ ಉದ್ಯಮಶೀಲತೆ – ಅವಕಾಶಗಳು ಮತ್ತು ಸವಾಲುಗಳುಹಾಗೂ ಸುಸ್ಥಿರ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಯಶಸ್ವಿಯಾಗಿ ಉದ್ಯಮವನ್ನು ನಡೆಸುತ್ತಿರುವ ಮಹಿಳಾ ಸಾಧಕರಿಂದ ಅನುಭವಗಳ ಪ್ರಸ್ತುತಿ ಎಂಬ ವಿಷಯಗಳ ಕುರಿತು ಎರಡು ವಿಚಾರಗೋಷ್ಠಿಗಳು ನಡೆಯಲಿವೆ.

ಸಮೃದ್ಧಿ-ಸಂತೃಪ್ತಿ-ಸಬಲೀಕರಣ: ಮಹಿಳಾ ಸಬಲೀಕರಣವು, ಮಹಿಳೆಯರಿಗೆ ಸಂಪನ್ಮೂಲಗಳು, ಅವಕಾಶಗಳು ಮತ್ತು ಬದುಕಿನ ಪ್ರಮುಖ ಅಂಶಗಳಲ್ಲಿ ಪರಿಪೂರ್ಣತೆಯಿಂದ ಭಾಗವಹಿಸುವಂತೆ ಅನುಕೂಲ ಮಾಡುವ ಸಾಂಸ್ಥಿಕವಾದ ಸಹಕಾರ ಇತ್ಯಾದಿಗಳನ್ನು ದೊರಕಿಸಿ ಕೊಡುವ ಗುರಿಗಳ ಒಂದು ನಿರ್ಣಾಯಕ ಪ್ರಕ್ರಿಯೆ. ಇದಕ್ಕಾಗಿ ವ್ಯವಸ್ಥೆಯಲ್ಲಿರುವ ಲಿಂಗ ತಾರತಮ್ಮ ಹಾಗೂ ಶೈಕ್ಷಣಿಕ, ಆರ್ಥಿಕ, ಆರೋಗ್ಯ, ರಾಜಕೀಯ ಅವಕಾಶಗಳನ್ನು ಪಡೆಯಲು ಇರುವ ಅಸಮಾನತೆಗಳನ್ನು ಸರಿಪಡಿಸುವುದು ಅವಶ್ಯಕ. ಮಹಿಳಾ ಸಬಲೀಕರಣ ಮಾನವ ಹಕ್ಕುಗಳ ದೃಷ್ಟಿಕೋನದಲ್ಲಿ ಮಾತ್ರವಲ್ಲದೆ ಸುಸ್ಥಿರ ಅಭಿವೃದ್ಧಿಯಲ್ಲಿ ಮತ್ತು ಎಲ್ಲರನ್ನೂ ಒಳಗೊಂಡಿರುವ ಒಂದು ಸಮಗ್ರ ಸಮಾಜವನ್ನು ಸಲಹುವ ವಿಷಯದಲ್ಲಿಯೂ ಮಹತ್ವದ್ದಾಗಿದೆ.

ಲಿಂಗ ಸಮಾನತೆಯನ್ನು ಪ್ರಚಾರ ಪಡಿಸುವುದರ ಜೊತೆಗೆ ಸಮಾಜದಲ್ಲಿನ ಕೆಲವು ರೂಢ ಮಾದರಿಗಳಿಗೆ ಸವಾಲು ಹಾಕುವ ಮೂಲಕ ಮಹಿಳೆಯರಿಗೆ ಪೂರಕವಾಗುವ ವಾತಾವರಣವನ್ನು ಸೃಷ್ಟಿಸುವ ಉದ್ದೇಶಗಳನ್ನು ಹೊಂದಿದೆ. ಇದು ಅವರಿಗೆ ಶಿಕ್ಷಣ ಮತ್ತು ಕೌಶಲ್ಯ ಹೆಚ್ಚಿಸುವ ತರಬೇತಿಯನ್ನು ಪಡೆಯುವ ಅವಕಾಶಗಳನ್ನು ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ನೀಡುವುದು, ಮಹಿಳೆಯರ ನಾಯಕತ್ವ ಮತ್ತು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡುವುದು ಮತ್ತು ಲಿಂಗ ಆಧಾರಿತವಾಗಿ ಅವರ ಮೇಲಾಗುವ ದೌರ್ಜನ್ಯ ಮತ್ತು ತಾರತಮ್ಯಗಳ ಸರಿಪಡಿಸುವಿಕೆ ಇತ್ಯಾದಿಗಳನ್ನು ಒಳಗೊಂಡಿದೆ.ಮಹಿಳೆಯರ ಸಬಲೀಕರಣದ ಪ್ರಯೋಜನ ಮಹಿಳೆಯರಿಗೆ ಮಾತ್ರವಲ್ಲದೆ ಅವರ ಕುಟುಂಬಗಳಿಗೆ, ಸಮುದಾಯಗಳಿಗೆ ಮತ್ತು ಇಡಿ ದೇಶದ ಒಳಿತಿಗೆ ಸಹಕಾರಿಯಾಗಿದೆ. ಮಹಿಳೆಯರ ಅಭಿವೃದ್ಧಿಯಾದರೆ, ಅವರು ಆರ್ಥಿಕತೆ, ಸಾಮಾಜಿಕ ಒಗ್ಗಟಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಬಹುದಾಗಿದೆ. ಅವರು ಬದಲಾವಣೆಯ ಕಾರ್ಯಕರ್ತರಾಗಿ ಲಿಂಗ ಸಮಾನತೆ ಮತ್ತು ಸಮಾಜದ ಅಂತರ್ಗತ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದಾಗಿದೆ.

ಇದನ್ನು ನೆರವೇರಿಸಲು ಸರಕಾರಗಳು, ನಾಗರಿಕ ಸಮಾಜ, ಖಾಸಗಿ ವಲಯ ಮತ್ತು ಸಮುದಾಯಗಳು ಸೇರಿ ಬಹು ಆಯಾಮಗಳಲ್ಲಿ ಕೆಲಸ ಮಾಡಬೇಕಿದೆ.ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕ ಸಬಲೀಕರಣ ಇತ್ಯಾದಿ ಕ್ಷೇತ್ರಗಳಲ್ಲಿ ವ್ಯವಸ್ಥೆಗೆ ಸಂಬಂಧಪಟ್ಟ ನೀತಿಗಳಲ್ಲಿ ಬೇಕಾಗಿರುವ ಬದಲಾವಣೆಗಳು, ಗುರಿಯನ್ನು ತಲುಪಲು ಮಾಡಬೇಕಾದ ಮಧ್ಯಸ್ಥಿಕೆ ಮತ್ತು ಹೂಡಿಕೆಗಳು ಅವಶ್ಯಕವಾಗಿವೆ.

ಸೆಲ್ಕೋ ಸೋಲಾ‌ರ್ ಸಂಸ್ಥೆಯು ಈ ಎಲ್ಲಾ ಬದಲಾವಣೆಗಳ ವೇಗವರ್ಧನೆಯಲ್ಲಿ ಮಹತ್ವದ ಹೆಜ್ಜೆಗಳನ್ನು ಇಡುತ್ತಾ “EMPOWER HER” (ಅವಳನ್ನು ಸಬಲೀಕರಿಸಿ) ಎಂಬ ಶೀರ್ಷಿಕೆಯೊಂದಿಗೆ ಕಾರ್ಯಗಾರವನ್ನು ಎಸ್.‌ಕೆ.ಡಿ.ಆ‌ರ್.ಡಿ.ಪಿ. ಸಂಸ್ಥೆಯ ಜೊತೆ ಸೇರಿ ಅದರ ಆವರಣದಲ್ಲಿ ಆಯೋಜಿಸುತ್ತಿದೆ.ಗ್ರಾಮೀಣ ಭಾಗಗಳಲ್ಲಿ ಮಹಿಳೆಯರ ಬಲವರ್ಧನೆಗೆ ಅನುಕೂಲವಾಗುವ ಜ್ಞಾನ ಮತ್ತು ಸಂಪನ್ಮೂಲಗಳನ್ನು ದೊರಕಿಸಿ ಕೊಡುವ ಮಹತ್ವದ ಲಕ್ಷ್ಯವನ್ನು ಈ ಕಾರ್ಯಗಾರವು ಹೊಂದಿದೆ.ಇದು ಸಮುದಾಯಗಳಲ್ಲಿ ಅವರ ಬದುಕನ್ನು ಸುಗಮವಾಗಿಸುವಲ್ಲಿ ಉಪಯುಕ್ತವಾಗಲಿದೆ.

ಸಂಪರ್ಕಿಸಲು: 9449595087, 9731352750

LEAVE A REPLY

Please enter your comment!
Please enter your name here