ಅರಸಿನಮಕ್ಕಿ ಗ್ರಾ.ಪಂ ನ ಗ್ರಾಮ ಸಭೆ

0

ಅರಸಿನಮಕ್ಕಿ: ಅರಸಿನಮಕ್ಕಿ ಗ್ರಾ.ಪಂ ನ ಗ್ರಾಮ ಸಭೆಯು ಮಾ.13ರಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇದರ ಸಭಾಂಗಣದಲ್ಲಿ ಪಂಚಾಯತ್ ಅಧ್ಯಕ್ಷೆ ಗಾಯತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ನೋಡಲ್ ಅಧಿಕಾರಿಯಾಗಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಹೇಮಚಂದ್ರ ರವರು ಉಪಸ್ಥಿತರಿದ್ದರು.

ರೆಖ್ಯಾದ ಪ್ರಕಾಶ್ ರವರು ಮಾತನಾಡಿ ಪ್ರತಿ ಗ್ರಾಮ ಸಭೆಯಲ್ಲಿ ಪಂಪು ಮತ್ತು ನಿಗರಿನ ಖರ್ಚಿನ ವಿವರವನ್ನು ಹೇಳುತ್ತೀರಾ ರೆಕ್ಕೆದ ಕಟ್ಟೆ ಎಂಬಲ್ಲಿ ನೀರಿನ ಸಮಸ್ಯೆ ಹಲವು ವರ್ಷಗಳಿಂದ ಇದ್ದು ತೀರಾ ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ ದಯವಿಟ್ಟು ನಮಗೆ ನೀರು ಕೊಡಿ ಎಂದು ಪಂಚಾಯತ್ ಬಳಿ ಮನವಿ ಮಾಡಿದರು.

ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಧೀರ್ ಕುಮಾರ್ ರವರು ಮುಂದಿನ ಒಂದು ತಿಂಗಳ ಒಳಗಡೆ ನೀರು ಸಿಗುವ ಹಾಗೆ ಮಾಡುತ್ತೇವೆ, ಹಳೆ ಪೈಪು ತೆಗೆದು ಹೊಸ ಪೈಪ್ ಹಾಕಿರುವ ಕಾರಣ ಫಿಟ್ಟಿಂಗ್ ಸಮಸ್ಯೆಯಾಗಿದೆ ಆದಷ್ಟು ಬೇಗ ಸರಿ ಮಾಡುತ್ತೇವೆ ಎಂದರು.

ವಾರ್ಡ್ ಸಭೆಗೆ ಜನರ ಕೊರತೆ ಎಂದು ಪಿಡಿಒ ಹೇಳಿದಾಗ ರೆಖ್ಯಾದ ತಾರನಾಥ್ ರವರು ಮಾತನಾಡಿ ಪಂಚಾಯತ್ ಗೆ ಸಂಬಂಧಪಟ್ಟ ಕೆಲಸದ ಅರ್ಜಿಯನ್ನು ಈ ಹಿಂದೆಯೂ ಸಲ್ಲಿಸಿದ್ದೆವು ಅದನ್ನೇ ಈಡೇರಿಸದ ಮೇಲೆ ವಾರ್ಡ್ ಸಭೆಗೆ ಯಾಕೆ ಬರಬೇಕು ಎಂದರು.

LEAVE A REPLY

Please enter your comment!
Please enter your name here