ಶಿಶಿಲ ಗ್ರಾ.ಪಂ ನ ದ್ವಿತೀಯ ಸುತ್ತಿನ ಗ್ರಾಮಸಭೆ

0

ಶಿಶಿಲ: ಶಿಶಿಲ ಗ್ರಾಮ ಪಂಚಾಯತ್ 2023-24ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮಸಭೆ ಗ್ರಾ.ಪಂ ಅಧ್ಯಕ್ಷ ಸುಧೀನ್.ಡಿ ಅಧ್ಯಕ್ಷತೆಯಲ್ಲಿ ಮಾ.13ರಂದು ಶಿಶಿಲ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಗ್ರಾಮ ಸಭೆಯ ‌ಮಾರ್ಗದರ್ಶಿ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಹೇಮಲತಾ ಮಾರ್ಗದರ್ಶನದಲ್ಲಿ ಸಭೆ ನಡೆಯಿತು.

ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೃಷಿ ಇಲಾಖೆಯ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತ್ ಉಪಾಧ್ಯಕ್ಷರಾದ ಯಶೋಧರ ಕೆ.ವಿ, ಸದಸ್ಯರುಗಳಾದ ಚೆನ್ನಕ್ಕ, ಸಂದೀಪ್, ಲಲಿತಾ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಗ್ರಾ.ಪಂ ಪಿ.ಡಿ.ಓ ದಿನೇಶ್ ಎಂ ಸ್ವಾಗತಿಸಿ, ಸುಂದರ್ ವರದಿ ಮಂಡಿಸಿದರು, ಸಿಬ್ಬಂದಿಗಳು ಸಹಕರಿಸಿದರು‌.

LEAVE A REPLY

Please enter your comment!
Please enter your name here