ಬೆಳ್ತಂಗಡಿ: ಕಥೋಲಿಕ್ ಸ್ತ್ರೀ ಮಂಡಳಿ ಇದರ ಸಹಭಾಗಿತ್ವದಲ್ಲಿ ಅಂತರಾಷ್ಟ್ರಿಯ ಮಹಿಳಾ ದಿನಾಚರಣೆಯನ್ನು ನೈನಾಡ್ ಸಂತ ಫ್ರಾನ್ಸಿಸ್ ಆಸಿಸ್ಸಿ ಚರ್ಚ್ ವಠಾರದಲ್ಲಿ ಮಾ.3ರಂದು ಆಚರಿಸಲಾಯಿತು.
ವೇದಿಕೆಯಲ್ಲಿ ಕಥೋಲಿಕ್ ಸ್ತ್ರೀ ಮಂಡಳಿ ಬೆಳ್ತಂಗಡಿ ವಲಯ ಅಧ್ಯಕ್ಷೆ ಗ್ರೇಸಿ ಲೋಬೊ, ಕಥೋಲಿಕ್ ಸ್ತ್ರೀ ಮಂಡಳಿ ಬೆಳ್ತಂಗಡಿ ವಲಯ ನಿರ್ದೇಶಕ ವಂಫಾ ಜೇಮ್ಸ್ ಡಿಸೋಜ, ವಂ ಫಾ ಫ್ರಾನ್ಸಿಸ್ ಡಿಸೋಜ ನಿರ್ದೇಶಕ ಡಿಸಿಸಿ ಡಬ್ಯು, ನೈನಾಡು ಚರ್ಚಿನ ಮುಖ್ಯ ಗುರು. ಫಾ ಅನಿಲ್ ಅವಿಲ್ಡ್ ಲೋಬೋ, ಗ್ರೇಟ್ಟಾ ಪಿಂಟೊ ಅಧ್ಯಕ್ಷ್ ಡಿಸಿಸಿ ಡಬ್ಯು ನೈನಾಡು ಚರ್ಚ್ ಉಪಾಧ್ಯಕ್ಷ ಲ್ಯಾನ್ಸಿ ವಿಲಿಯಂ ಡಿಸೋಜ, ಇನಾಸ್ ರೋಡ್ರಿಗಸ್ ಕಥೋಲಿಕ್ ಸ್ತ್ರೀ ಮಂಡಳಿ ಬೆಳ್ತಂಗಡಿ ವಲಯ ಕಾರ್ಯದರ್ಶಿ ಆಶು ಜ್ಯೂಲಿಯೆಟ್ ಕ್ರಾಸ್ತ ಹಾಗೂ ಧರ್ಮ ಭಗಿನಿಯರು ಉಪಸ್ಥಿತರಿದ್ದರು.
ಸಾಂಸ್ಕ್ರತಿಕ ಕಾರ್ಯಕ್ರಮದ ನಂತರ ಬೆಳ್ತಂಗಡಿ ವಲಯದಲ್ಲಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದವರಿಗೆ ಗೌರವಿಸಲಾಯಿತು.
350ಕ್ಕೂ ಹೆಚ್ಚು ಕಥೋಲಿಕ್ ಸ್ತ್ರೀಯರು ಭಾಗಿಯಾಗಿದ್ದರು ಅಧ್ಯಕ್ಷೆ ಗ್ರೇಸಿ ಲೋಬೊ ಪ್ರಾಸ್ತವಿಕ ನುಡಿಯೊಂದಿಗೆ ಸ್ವಾಗತಿಸಿದರು.
ಕಾರ್ಯದರ್ಶಿ ಆಶು ಜ್ಯೂಲಿಯೆಟ್ ಕ್ರಾಸ್ತ ವಾರ್ಷಿಕ ವರದಿ ವಾಚಿಸಿದರು.
ಲೀನಾ ಕ್ರಾಸ್ತ ಅರ‍್ವಾ ಕಾರ್ಯಕ್ರಮ ನಿರೂಪಿಸಿದರು.ಶಾಂತಿಯವರು ವಂದಿಸಿದರು.