ಬೆಳ್ತಂಗಡಿ: ವಿಶ್ವ ಮಹಿಳಾ ದಿನಾಚರಣೆ ಹಾಗೂ ಮಹಿಳಾ ವಾಹನ ಜಾಥಾ

0

ಬೆಳ್ತಂಗಡಿ: ಮಂಗಳೂರು ಜಿಲ್ಲಾ ಮಹಿಳಾ ಮಂಡಲ, ಬೆಳ್ತಂಗಡಿ ಮಹಿಳಾ ಒಕ್ಕೂಟ ಮತ್ತು ಮಹಿಳಾ ಸಾಂತ್ವನ ಕೇಂದ್ರ, ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ, ಬೆಳ್ತಂಗಡಿ ಮಹಿಳಾ ವೃಂದ, ಉಜಿರೆ ಪ್ರಗತಿ ಮಹಿಳಾ ಮಂಡಲ, ಮೇಲಂತಬೆಟ್ಟು ಸ್ಪೂರ್ತಿ ಮಹಿಳಾ ಮಂಡಲ, ಕುವೆಟ್ಟು ವೈಭವಿ ಮಹಿಳಾ ಮಂಡಲ, ಲೇಡಿ ಜೆ.ಸಿ. ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಸಹಭಾಗಿತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆ, ಮಹಿಳಾ ಜಾಥಾ ಮಾ.12ರಂದು ಜರಗಿತು.

ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸಂದೇಶ್ ಕೆ. ಮಹಿಳಾ ವಾಹನ ಜಾಥಾಕ್ಕೆ ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಚಾಲನೆ ನೀಡಿ ಶುಭ ಹಾರೈಸಿದರು.

ಅಂಬೇಡ್ಕರ್ ಭವನದಿಂದ ಹೊರಟು ಜಾಥಾ ಸಂತೆಕಟ್ಟೆ ಅಯ್ಯಪ್ಪ ಸ್ವಾಮಿ ದೇವಸ್ಥಾನವಾಗಿ, ಸುವರ್ಣ ಆರ್ಕೇಡ್ ನಲ್ಲಿ ಸಮಾಪ್ತಿಗೊಂಡಿತು.ಬಳಿಕ ಸುವರ್ಣ ಆರ್ಕೇಡ್ ನ ಸಪ್ತಪದಿ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಅಡಿಷನಲ್ ಸಿವಿಲ್ ಜಡ್ಜ್ ವಿಜಯೇಂದ್ರ ಟಿ ಎಚ್ ಉದ್ಘಾಟಿಸಿದರು.

ತಾಲೂಕು ಮಹಿಳಾ ಮಂಡಲದ ಒಕ್ಕೂಟದ ಅಧ್ಯಕ್ಷೆ ಸವಿತಾ ಜಯದೇವ್ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಿಯಾ ಆಗ್ನೇಸ್, ಉಜಿರೆಯ ದಂತ ವೈದ್ಯೆ ದೀಪಾಲಿ ಡೋಂಗ್ರೆ, ದ.ಕ.ಜಿಲ್ಲಾ ಮಹಿಳಾ ಮಂಡಲ ಒಕ್ಕೂಟದ ಅಧ್ಯಕ್ಷೆ ಚಂಚಲ ತೇಜೋಮಯ, ಕಡಿರುದ್ಯಾವರ ವಿದ್ಯಾ ಸರಸ್ವತಿ ಮಹಿಳಾ ಮಂಡಲ ಅಧ್ಯಕ್ಷೆ ಲೋಕೇಶ್ವರಿ ವಿನಯಚಂದ್ರ, ದ.ಕ.ಜಿಲ್ಲಾ ಮಹಿಳಾ ಮಂಡಲ ಒಕ್ಕೂಟದ ಕಾರ್ಯದರ್ಶಿ ಶಾಂತಾ ಬಂಗೇರ, ಬೆಳ್ತಂಗಡಿ ಮಹಿಳಾ ವೃಂದ ಅಧ್ಯಕ್ಷೆ ಆಶಾ ಸತೀಶ್, ಬೆಳ್ತಂಗಡಿ ಮಂಜುಶ್ರೀ ಜೆಸಿಐ, ಜೆಸಿ ಲೇಡಿ ಸಂಯೋಜಕಿ ಶ್ರುತಿ ರಂಜಿತ್, ಬೆಳ್ತಂಗಡಿ ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ ಅಧ್ಯಕ್ಷೆ ನಿಶಾ ಯಶವಂತ್, ಮೇಲಂತಬೆಟ್ಟು ಸ್ಪೂರ್ತಿ ಮಹಿಳಾ ಮಂಡಲ ಅಧ್ಯಕ್ಷೆ ಜೆಸಿಂತ ಮೋನೀಸ್ , ಹಾಗೂ ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ಸೌಮ್ಯಶ್ರೀ ಉಪಸ್ಥಿತರಿದ್ದರು.

ಉಜಿರೆಯ ಮಹಿಳಾ ಉದ್ಯಮಿ ಅರ್ಚನ ಪೈ, ತೋಟತ್ತಾಡಿ ಪೌರಕಾರ್ಮಿಕೆ ಶುಭಾ ಹಾಗೂ ಅಕ್ಷ ಅಜಯ್ ಶೆಟ್ಟಿ ಉಜಿರೆ ಅವರನ್ನು ಸನ್ಮಾನಿಸಲಾಯಿತು.ಅತಿಥಿ ಉಪನ್ಯಾಸಕಿ ಹೇಮಾವತಿ ಕೆ ಹಾಗೂ ಉಷಾ ಲಕ್ಷ್ಮಣ ಗೌಡ ಕಾರ್ಯಕ್ರಮ ನಿರೂಪಿಸಿದರು.

p>

LEAVE A REPLY

Please enter your comment!
Please enter your name here