ಕೊಕ್ಕಡ ಗ್ರಾಮ ಪಂಚಾಯತ್ ದ್ವಿತೀಯ ಸುತ್ತಿನ ಗ್ರಾಮ ಸಭೆ

0

ಕೊಕ್ಕಡ: ಕೊಕ್ಕಡ ಗ್ರಾಮ ಪಂಚಾಯತ್ 2023-24ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮ ಸಭೆ ಗ್ರಾ.ಪಂ ಅಧ್ಯಕ್ಷೆ ಬೇಬಿ ಅಧ್ಯಕ್ಷತೆಯಲ್ಲಿ ಮಾ.11ರಂದು ಅಂಬೇಡ್ಕರ್ ಭವನ ಕೊಕ್ಕಡ
ವಠಾರದಲ್ಲಿ ನಡೆಯಿತು.

ಗ್ರಾಮ ಸಭೆಯ ‌ಮಾರ್ಗದರ್ಶಿ ಅಧಿಕಾರಿಯಾಗಿ ಕೃಷಿ ಇಲಾಖೆಯ ಅಧಿಕಾರಿ ಚಿದಾನಂದ ಮಾರ್ಗದರ್ಶನದಲ್ಲಿ ಸಭೆ ನಡೆಯಿತು.

ಕಂದಾಯ ಇಲಾಖೆ, ಕೃಷಿ ಇಲಾಖೆ,ಆರೋಗ್ಯ ಇಲಾಖೆ, ಮೆಸ್ಕಾಂ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು.

ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರಭಾಕರ್, ಸದ್ಯಸರಾದ ಯೋಗಿಶ್, ಪ್ರವಿತ್ರ ಕೆ, ಜಗದೀಶ್ ಪೂಜಾರಿ, ಜಾನಕಿ, ಲತಾ, ಪ್ರಮೀಳಾ ಜಿ, ಪುರುಷೋತ್ತಮ, ಶರತ್ ಕುಮಾರ್, ವನಿತಾ, ವನಜಾಕ್ಷಿ, ವಿಶ್ವಾನಾಥ ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಗ್ರಾ.ಪಂ ಪಿ.ಡಿ.ಓ ದೀಪಕ್ ರಾಜ್ ಎಮ್ ಸ್ವಾಗತಿಸಿ, ವರದಿ ಮಂಡಿಸಿದರು.ಸಿಬ್ಬಂದಿಗಳು ಸಹಕರಿಸಿದರು‌.

LEAVE A REPLY

Please enter your comment!
Please enter your name here