ಪದ್ಮುಂಜ: ಕೋಟ್ರಾಸ್ ಪರಿಸರದಲ್ಲಿ ಮಾ.11ರಂದು ಮುಂಜಾನೆ 4.30ರ ಸಮಯಕ್ಕೆ ನೀಲಯ್ಯ ನಲ್ಕೆ ಎಂಬವರ ಮನೆ ಸಮೀಪ ಸಿಕ್ಕಾಪಟ್ಟೆ ನಾಯಿ ಬೊಗಳುತ್ತಿದ್ದ ಕಾರಣ ಎಚ್ಚೆತ್ತ ನೀಲಯ್ಯ ನಲ್ಕೆ ಯವರ ಮಗ ಕೇಶವ ಎಂಬವರು ಲೈಟ್ ಹಚ್ಚಿ ನೋಡುವಾಗ ಮನೆಯಂಗಳದಲ್ಲಿ ಆನೆ ಪ್ರತ್ಯಕ್ಷವಾಗಿದೆ ಎಂದು ತಿಳಿದುಬಂದಿದೆ.
ಅವರ ತೋಟದಿಂದ ಬಂದ ಆನೆ ಬಾಳೆ ಗಿಡಗಳಿಗೆ ಹಾನಿ ಮಾಡಿದೆ ಅದೇ ರೀತಿ ಸುಬ್ಬಣ್ಣ ಶೆಟ್ಟಿಯವರ ಮನೆ ಸಮೀಪ ಹೋಗಿದ್ದ ಆನೆ ಅವರ ಪಪ್ಪಾಯಿ ಗಿಡಗಳನ್ನು ದೂಡಿ ಹಾಕಿ ಹಾನಿಗೊಳಿಸಿದ್ದು ಕಂಡು ಬಂದಿದೆ.
ಒಟ್ಟಾರೆಯಾಗಿ ಯಾವುದೇ ಕಾಡು ಪ್ರಾಣಿಗಳ ಭಯವಿಲ್ಲದೆ ಬದುಕುತ್ತಿದ್ದ ಪದ್ಮುಂಜದ ಗ್ರಾಮಸ್ಥರಿಗೆ ಆತಂಕ ಉಂಟು ಮಾಡಿದೆ.ಮಾ.8, 9ರಂದು ಕಣಿಯೂರು ಪರಿಸರದಲ್ಲಿಯೂ ಆನೆ ಪ್ರತ್ಯಕ್ಷವಾಗಿತ್ತೆಂದು ತಿಳಿದುಬಂದಿದೆ.
p>