ಉಜಿರೆ: ಉಜಿರೆ ಕಿರಿಯಾಡಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ವಾರ್ಷಿಕ ಮಹಾಶಿವರಾತ್ರಿ ಉತ್ಸವ ಪ್ರಯುಕ್ತ ಮಾ.8ರಂದು ಸಂಜೆ ಕಿರಿಯಾಡಿ ಶ್ರೀ ಉಮಾಮಹೇಶ್ವರ ಭಜನಾ ಮಂಡಳಿ ಮತ್ತು ಹಳೆಪೇಟೆ ಶ್ರೀ ರಾಮ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ವಾಸುದೇವ ಸಂಪಿಗೆತ್ತಾಯ ಅವರ ನೇತೃತ್ವದಲ್ಲಿ ಸಂಜೆ ವಿಪ್ರ ಬಾಂಧವರಿಂದ ಸಾಮೂಹಿಕ ರುದ್ರ ಪಾರಾಯಣ ಹಾಗೂ ದೇವರಿಗೆ ಶತರುದ್ರಾಭಿಷೇಕ ಮತ್ತು ರಾತ್ರಿ ರಂಗಪೂಜೆ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸುಬ್ರಹ್ಮಣ್ಯದ ಖ್ಯಾತ ಸಂಗೀತ ಕಲಾವಿದ ಯಜ್ನೇಶ್ ಆಚಾರ್ ಮತ್ತು ಬಳಗದವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು.
ಹಿಮ್ಮೇಳದಲ್ಲಿ ತಬಲಾದಲ್ಲಿ ಪ್ರಸಾದ್ ಬಾಯಾರು ಮತ್ತು ಕೀ ಬೋರ್ಡ್ ನಲ್ಲಿ ಸುಮನ್ ದೇವಾಡಿಗ ಸಹಕರಿಸಿದ್ದರು.
ಶಿಕ್ಷಕ ರಮೇಶ್ ಮಯ್ಯ ವಂದಿಸಿ, ದೇವಸ್ಥಾನದ ವತಿಯಿಂದ ವಿಷ್ಣುಮೂರ್ತಿ ಸಂಪಿಗೆತ್ತಾಯ ಸಂಗೀತ ಕಲಾವಿದ ಯಜ್ನೇಶ್ ಆಚಾರ್ ಅವರಿಗೆ ಶ್ರೀ ದೇವರ ಪ್ರಸಾದ ಹಾಗು ಸ್ಮರಣಿಕೆ ನೀಡಿ ಗೌರವಿಸಿದರು.
ಮಹಾಶಿವರಾತ್ರಿ ಉತ್ಸವದಲ್ಲಿ ಪರಿಸರದ ಭಕ್ತಾದಿಗಳು ಭಕ್ತಿ, ಶ್ರದ್ಧೆಯಿಂದ ಭಾಗವಹಿಸಿದ್ದರು.