ಇತಿಹಾಸ ಪ್ರಸಿದ್ಧ ಬಂಗಾಡಿ ಸೀಮೆ ದೇವನಾರಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ

0

ಬಂಗಾಡಿ: ಇತಿಹಾಸ ಪ್ರಸಿದ್ಧ ಬಂಗಾಡಿ ಸೀಮೆಯ ದೇವನಾರಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದಲ್ಲಿ ವಿಜ್ರಂಭಣೆಯ ಪಾದಯಾತ್ರೆ ಮಹಾ ಶಿವರಾತ್ರಿ ಉತ್ಸವ ಸಂಪನ್ನಗೊಂಡಿತು.

ಬಂಗಾಡಿ ಸೀಮೆಯ ಇತಿಹಾಸ ಪ್ರಸಿದ್ಧ ದೇವನಾರಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಉತ್ಸವದ ಪ್ರಯುಕ್ತ ವಿಶೇಷ ದೇವತಾ ಕಾರ್ಯಗಳು ನಡೆದವು. ಬೆಳಿಗ್ಗೆ 5.00 ಗಂಟೆಗೆ ಭಕ್ತಾದಿಗಳಿಂದ ನಡೆದ ಶಿವ ಸಹಸ್ರನಾಮ ಪಠಣವನ್ನು ದೇವಸ್ಥಾನದ ಅರ್ಚಕರಾದ ಉದಯ್ ಭಟ್ ರವರು ನಡೆಸಿಕೊಟ್ಟರು.ಬೆಳಿಗ್ಗೆ 6.00 ಗಂಟೆಗೆ ಮೊದಲ ಯಾಮಾದ ಪೂಜೆ ನಡೆದು ಸಂಜೆ ಶತರುದ್ರಾಭಿಷೇಕದ ಜೊತೆಗೆ ಶತರುದ್ರ ಪಠಣವನ್ನು ಉಜಿರೆಯ ಹವ್ಯಕ ಬಾಂಧವರು ನಡೆಸಿಕೊಟ್ಟರು.

ಸಂಜೆ 6.00 ಗಂಟೆಗೆ ಸರಿಯಾಗಿ ಕಡಿರುದ್ಯಾವರ, ಮಲವಂತಿಗೆ, ನಡ-ಕನ್ಯಾಡಿ, ಮಿತ್ತಬಾಗಿಲು, ನಾವೂರು, ಇಂದಬೆಟ್ಟು ಗ್ರಾಮದ ಹಾಗೂ ತಾಲೂಕಿನ ವಿವಿಧ ಗ್ರಾಮಗಳಿಂದ ಭಕ್ತರು, ವಿವಿಧ ಭಜನಾ ತಂಡಗಳು ಶಿವನಾಮ ಸಂಕೀರ್ತನೆಯೊಂದಿಗೆ ಶ್ರೀ ಕ್ಷೇತ್ರಕ್ಕೆ ಪಾದಯಾತ್ರೆ ಮೂಲಕ ಆಗಮಿಸಿದರು.ಸಂದೇಶ್ ಮದ್ದಡ್ಕ ಮತ್ತು ಬಳಗದವರಿಂದ ಹಾಗೂ ತಾಲೂಕಿನ 35ಕ್ಕೂ ಹೆಚ್ಚು ಭಜನಾ ಮಂಡಳಿ ತಂಡಗಳೊಂದಿಗೆ ಭಕ್ತಿ ಗಾಯನ ಕಮ್ಮಟ ಭಜನೋತ್ಸವ ಶ್ರೀ ಕ್ಷೇತ್ರದಲ್ಲಿ ನಡೆಯಿತು. ದೇವರಿಗೆ ವಿಶೇಷ ರಂಗಪೂಜೆ ನಡೆದು ಸುಡುಮದ್ದು ಪ್ರದರ್ಶನ ನಡೆಯಿತು.

ಪ್ರಸಾದ ವಿತರಣೆ ನಡೆದು, ಭಕ್ತಾದಿಗಳಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಭಕ್ತಾದಿಗಳಿಂದ ಅಹೋರಾತ್ರಿ ಜಾಗರಣೆ ನಡೆದು ಬೆಳಿಗ್ಗೆ 6.00 ಗಂಟೆಗೆ ಪ್ರಾತಃ ಕಾಲದ ಯಾಮಾದ ಪೂಜೆಯೊಂದಿಗೆ 2024 ಮಹಾ ಶಿವರಾತ್ರಿ ಉತ್ಸವ ಸಂಪನ್ನಗೊಂಡಿತು.ಶ್ರೀ ಕ್ಷೇತ್ರದಲ್ಲಿ ಹೂವಿನ ಅಲಂಕಾರ ಎಲ್ಲಾರ ಗಮನ ಸೆಳೆಯಿತು.ಶ್ರೀ ಅರ್ಧನಾರೀಶ್ವರ ದೇವರ ಭಕ್ತರು ಮಾಜಿ ಸಚಿವ ಕೆ.ಗಂಗಾಧರ ಗೌಡರವರು ದಂಪತಿ ಸಮೇತರಾಗಿ ಆಗಮಿಸಿ ಕಮ್ಮಟ ಭಜನೆ ದೀಪ ಪ್ರಜ್ವಲನೆ ಮಾಡಿದರು.

ವೈದಿಕ ಕಾರ್ಯಕ್ರಮಗಳು ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಮೂ.ಆನಂದ ಭಟ್ ರವರು ನಡೆಸಿಕೊಟ್ಟರು.ಕಾರ್ಯಕ್ರಮದ ಯಶಸ್ವಿನ ಮಾರ್ಗದರ್ಶಕರಾದ ಡಾಕ್ಟರ್ ಪ್ರದೀಪ್ ನಾವೂರು, ವಿವಿಧ ಕ್ಷೇತ್ರಗಳ ಗಣ್ಯರು, ವ್ಯವಸ್ಥಾಪನಾ ಸಮಿತಿಯವರು ಹಾಗೂ ತಾಲೂಕಿನ ವಿವಿಧ ಗ್ರಾಮಗಳಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಮಹಾ ಶಿವರಾತ್ರಿ ಉತ್ಸವನ್ನು ಯಶಸ್ವಿಗೊಳಿಸಿದರು.

LEAVE A REPLY

Please enter your comment!
Please enter your name here