ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ

0

ಸುರ್ಯ: ಮಣ್ಣಿನ ಹರಕೆಯ ಪುಣ್ಯ ಕ್ಷೇತ್ರ ಶ್ರೀ ಸದಾಶಿವರುದ್ರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಿನ್ನಲೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಗಣ್ಯರು ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ಜರುಗಿದವು.

ದೇವಸ್ಥಾನದ ಪ್ರಧಾನ ಅರ್ಚಕ ಅನಂತರಾಮ ಮಯ್ಯ ರವರ ನೇತೃತ್ವದಲ್ಲಿ ಅರ್ಚಕರುಗಳಾದ ಶ್ರೀಕಾಂತ ಭಟ್, ಶ್ರೀನಿವಾಸ ಭಟ್ ಇವರಿಂದ ಬೆಳಿಗ್ಗೆ ರುದ್ರಯಾಗ ನಡೆಯಿತು.

ಮಧ್ಯಾಹ್ನ ವಿಶೇಷ ಅಲಂಕಾರ ಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.ರಾತ್ರಿ ಗಂಟೆ 8ರಿಂದ ಆಹ್ವಾನಿತ ಕುಣಿತ ಭಜನಾ ತಂಡಗಳಾದ, ಶ್ರೀ ಮಕರ ಜ್ಯೋತಿ ಮಕ್ಕಳ ತಂಡ ಕನ್ಯಾಡಿ, ಶ್ರೀ ಲಕ್ಷ್ಮೀ ಮಕ್ಕಳ ಭಜನಾ ತಂಡ ನಡ, ಶ್ರೀ ಛತ್ರಪತಿ ಶಿವಾಜಿ ಭಜನಾ ತಂಡ ಉಜಿರೆ, ಬ್ರಹ್ಮದೇವ ಭಜನಾ ತಂಡ ಅರಳಿ, ಶ್ರೀ ಬಲಮುರಿ ಮಹಿಳಾ ತಂಡ ಲಾಯಿಲ, ಮತ್ತು ಮಹಿಳಾ ಭಜನಾ ತಂಡ ಕುಕ್ಕಾವು ಇವರಿಂದ ಕುಣಿತ ಭಜನಾ ಕಾರ್ಯಕ್ರಮ ನಡೆಯಿತು.

ರಾತ್ರಿ ದೇವರಿಗೆ ಏಕಾದಶ ರುದ್ರಾಭಿಷೇಕ, ಮತ್ತು ರಂಗಪೂಜೆ ನಡೆಯಿತು.ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಸತೀಶ್ಚಂದ್ರ ಸುರ್ಯಗುತ್ತು, ಸಂದೀಪಾ ಸತೀಶ್ಚಂದ್ರ, ಮತ್ತು ಸಂಗ್ರಾಮ್ ಸುರ್ಯಗುತ್ತು, ಉಜಿರೆ ಶ್ರೀ ಜನಾರ್ಧನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ, ದೇವಸ್ಥಾನದ ಅಭಿವೃದ್ಧಿ ಮಂಡಳಿ ಅಧ್ಯಕ್ಷ ರಾಜಶೇಖರ ಅಜ್ರಿ, ಬಿ.ಮುನಿರಾಜ ಅಜ್ರಿ, ಡಾ.ಎಲ್.ಹೆಚ್. ಮಂಜುನಾಥ್, ಮತ್ತು ಊರ, ಪರವೂರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here