

ಗುರುವಾಯನಕೆರೆ: ಇಲ್ಲಿನ ನಿವಾಸಿ, ಖ್ಯಾತ ನಾಟಿ ವೈದ್ಯ ಎಂದೇ ಪ್ರಖ್ಯಾತಿ ಪಡೆದಿದ್ದ ಪಶು ತಜ್ಞರಾಗಿದ್ದ ಅಣ್ಣಿ ಶೆಟ್ಟಿ(92ವ)ಯವರು ಇಂದು(ಮಾ.05) ನಿಧನರಾಗಿದ್ದಾರೆ.
ಕಂಬಳದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು.ಜಾನುವಾರುಗಳಿಗೆ ಮದ್ದು ನೀಡುತ್ತಿದ್ದ ಅಣ್ಣಿ ಶೆಟ್ಟಿಯವರ ಕೈಗುಣ ಅಪಾರ ಕೀರ್ತಿಗೆ ಪಾತ್ರವಾಗಿತ್ತು.
ಇವರು ಐವರು ಪುತ್ರರು, ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.