ಧರ್ಮಸ್ಥಳ: ಕಾಡಿನಿಂದ ನಾಡಿಗೆ ಬಂದ ಒಂಟಿ ಸಲಗ ಮಾ.06ರಂದು ಬೆಳಗ್ಗಿನ ಜಾವ ನಾರ್ಯ ಪರಿಸರದ ಆರಿಕೋಡಿ, ಮಾಲ್ಯಾಳ, ಗಾಣದಬೆಟ್ಟು ಜಗದೀಶ್ ಗೌಡ , ಕೆಮ್ಮಟೆ ಚೆನ್ನಪ್ಪ ಗೌಡ, ನೀರ ಚಿಲುಮೆ ಚಂದ್ರಕಾಂತ್ ಇವರ ಬಾಳೆ ಗದ್ದೆ , ಮುಂತಾದ ಕೃಷಿಗಳಿಗೆ ಭೂಮಿಗೆ ಆನೆ ದಾಳಿ ಮಾಡಿದ್ದು, ಮೂರು ದಿನಗಳಿಂದ ಈ ಪ್ರದೇಶದ ಆಸುಪಾಸಿನಲ್ಲಿ ಕಾಣಿಸಿಕೊಳ್ಳುತ್ತಿದೆ.
ಅರಣ್ಯ ಇಲಾಖೆಯವರಿಗೆ ತಿಳಿಸಿದರು ಮುಂಜಾಗ್ರತ ಕ್ರಮವಾಗಿ ಯಾವುದೇ ರೀತಿಯ ಸ್ಪಂದನೆ ದೊರೆತಿಲ್ಲ ಎಂದು ಕೃಷಿ ಭೂಮಿಯ ಮಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಪ್ರದೇಶದಲ್ಲಿ ಮತ್ತೆ ಮತ್ತೆ ಒಂಟಿ ಸಲಗವು ಕಾಣಿಸಿಕೊಳ್ಳುತ್ತಿದ್ದು ರಾತ್ರಿ ಹೊತ್ತಿನಲ್ಲಿ ರಬ್ಬರ್ ಟ್ಯಾಪಿಂಗ್ ಮುಂತಾದ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಭಯವಾಗುತ್ತದೆ ಎಂದು ಸಾರ್ವಜನಿಕರು ತಿಳಿಸಿದರು.
p>