ಮಚ್ಚಿನ: ಉದಯ ಕಲಾ ಯುವಕ ಮಂಡಲ ಪಾಲಡ್ಕ ಸುವರ್ಣ ಸಂಭ್ರಮದ ಸವಿ ನೆನಪಿನ ನೂತನ ಕಟ್ಟಡ ಉದ್ಘಾಟನೆ- ನವೋದಯ ಮಹಿಳಾ ಮಂಡಲದ ಜಂಟಿ ವಾರ್ಷಿಕೋತ್ಸವ

0

ಮಚ್ಚಿನ: ಉದಯ ಕಲಾ ಯುವಕ ಮಂಡಲ ಪಾಲಡ್ಕ ಸುವರ್ಣ ಸಂಭ್ರಮದ ಸವಿ ನೆನಪಿನ ನೂತನ ಕಟ್ಟಡ ಉದ್ಘಾಟನೆ ಹಾಗೂ ಉದಯ ಕಲಾ ಯುವಕ ಮಂಡಲ ಪಾಲಡ್ಕ ಹಾಗೂ ನವೋದಯ ಮಹಿಳಾ ಮಂಡಲ ಪಾಲಡ್ಕ ಇದರ ಜಂಟಿ ವಾರ್ಷಿಕೋತ್ಸವ ಮಾ.2ರಂದು ನಡೆಯಿತು.

ನೂತನ ಕಟ್ಟಡದ ಉದ್ಘಾಟನೆಯನ್ನು ಹರೀಶ್ ಪೂಂಜ ಶಾಸಕರು ಬೆಳ್ತಂಗಡಿ ಇವರ ಉದ್ಘಾಟಿಸಿದರು.ಮಹಿಳೆಯರ ಭಜನಾ ತರಬೇತಿಯನ್ನು ಡಾ.ಹರ್ಷ ಸಂಪಿಗೆತ್ತಾಯ ಅನುವಂಶಿಕ ಆಡಳಿತ ಮುಕ್ತೇಸರರು ಶ್ರೀ ಕ್ಷೇತ್ರ ಬಳ್ಳ ಮಂಜ ಇವರ ದೀಪಾ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಶ್ರೀ ದುರ್ಗಾಪರಮೇಶ್ವರಿ ಸೇವಾ ಟ್ರಸ್ಟ್ ತಾರೆಮಾರ್ ಇದರ ಭಜನಾ ಮಂಡಳಿಯ ಅಧ್ಯಕ್ಷರಾದ ಸಿದ್ದಪ್ಪ ಗೌಡ ಹಿರಿಯರಾದ ಸದಾನಂದ ಪೂಜಾರಿ ಕುರುಡಂಗೆ, ಫಲಿರಾದ ಯಶೋಧರ ಮರಕಡ, ರಾಘವ ಪೂಜಾರಿ ಮಾಯಿಲೋಡಿ ಇವರು ಉಪಸ್ಥಿತರಿದ್ದರು.

ಸಂಜೆ ಪಾಲಡ್ಕ ಹಾಗೂ ತಾರೆಮಾರು ಅಂಗನವಾಡಿ ಮಕ್ಕಳಿಂದ ನೃತ್ಯ ಕಾರ್ಯಕ್ರಮ ನಡೆಯಿತು ನಂತರ ಸಮಾರೋಪ ಸಮಾರಂಭದ ಉಪಸ್ಥಿತಿಯಲ್ಲಿ ಮಾನ್ಯ ಶಾಸಕರು ಹರೀಶ್ ಪೂಂಜ, ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ರುಕ್ಮಿಣಿ ಅಧ್ಯಕ್ಷರು ಗ್ರಾಮ ಪಂಚಾಯತ್ ಮಚ್ಚಿನ ಇವರ ದೀಪ ಬೆಳಗಿಸಿ ಉದ್ಘಾಟಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಸಂತ ಮರಕಡ ಅಧ್ಯಕ್ಷರು ಉದಯ ಕಲಾ ಯುವಕ ಮಂಡಲ ಪಾಲಡ್ಕ ಇವರು ವಹಿಸಿದರು.ಗೌರವ ಉಪಸ್ಥಿತಿಯಲ್ಲಿ ಅನಂತ್ರಾಮ ಗೌಡ ಪಳ್ಳತಲ, ಮುಖ್ಯ ಅತಿಥಿಗಳಾಗಿ ಕುಮಾರಯ್ಯ ನಾಯ್ಕ, ಬಳ್ಳಮಂಜ ಜೋಸೆಫ್ ವೇಗಸ್ ಬೆರ್ಬಲಾಜೆ, ಶಶಿಧರ ಗೌಡ ಪುಳಿಕಳ, ಗೋಪಾಲ ಗೌಡ ಸವಣಲು, ಅವಿನಾಶ್ ನಮನ ಬಳ್ಳಮಂಜ, ಜಯಂತ ಪಾಲಡ್ಕ ದೈವ ನರ್ತಕರು, ಕೇಶವ ಗೌಡ ಗುಂಡಿಜಲು, ಲಕ್ಷ್ಮಣ ಗೌಡ ಪಲ್ಲೆಕೊಡಿ, ಆನಂದ ಗೌಡ ಪೆರೂರು, ದಾಮೋದರ ಆಚಾರ್ಯ ಮಡಕ್ಕಿಲ, ಉಮೇಶ್ ಗೌಡ ನಂದಿಕಾಡು, ಬಾಬು ನಾಯ್ಕ ಮುದ್ದಲ್ಮೆ, ಶಿವಪ್ಪಗೌಡ ನಿಡ್ದಾಜೆ, ದರ್ಣಪ್ಪ ಕುಲಾಲ್ ಪಟ್ಲತ್ತೋಡಿ, ರಾಮಚಂದ್ರಗೌಡ ಲಾವದ ಪಲ್ಕೆ, ಕೃಷ್ಣಪ್ಪಗೌಡ ಕೋಡಿ, ಬಾಬು ಗೌಡ ಲಾವದ ಪಲ್ಕೆ, ಸುನಿಲ್ ಕುಮಾರ್ ಮೈಲೋಡಿ, ಮನೋಜ್ ಗೌಡ ಕಜೆ ಇವರು ಉಪಸ್ಥಿತರಿದ್ದರು.

ನೂತನ ಕಟ್ಟಡಕ್ಕೆ ಸಹಕಾರ ನೀಡಿದ ಶಾಸಕರಾದ ಹರೀಶ್ ಪೂಂಜ ಇವರನ್ನು ಸನ್ಮಾನಿಸಲಾಯಿತು ಹಾಗೂ ದಿವಂಗತ ಬೊಮ್ಮಣ್ಣ ನಲಿಕೆ, ದಿವಂಗತ ಕುಮಾರಯ್ಯ ನಾಯ್ಕ ಇವರ ಮನೆಯವರನ್ನು ಗೌರವಿಸಲಾಯಿತು.ಶಾಲಾ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಹಾಗೂ ನವೋದಯ ಮಹಿಳಾ ಮಂಡಳದ ಸದಸ್ಯರಿಂದ ಜಾನಪದ ನೃತ್ಯ ನಡೆಯಿತು.

ಉದಯ ಕಲಾ ಯುವಕ ಮಂಡಲ ಸದಸ್ಯರಿಂದ ರವಿಚಂದ್ರ ಬಿ ಸಾಲ್ಯಾನ್ ವೇಣೂರು ವಿರಚಿತ ಡಬ್ಬಲ್ ಗೇಮ್ ಎಂಬ ತುಳು ಹಾಸ್ಯ ನಾಟಕ ನಡೆಯಿತು ಅಧ್ಯಕ್ಷರಾದ ವಸಂತ ಮರಕಡ, ಗೌರಧ್ಯಕ್ಷರಾದ ಅನಂತ್ರಾಮ ಗೌಡ ಪಳ್ಳತಲ, ಕಾರ್ಯದರ್ಶಿ ಜೀವನ್ ಪಟ್ಲತೋಡಿ, ಸರ್ವ ಸದಸ್ಯರು ಹಾಗೂ ನವೋದಯ ಮಹಿಳಾ ಮಂಡಳದ ಅಮಿತಾ ಚೇತನ್, ಕಾರ್ಯದರ್ಶಿ ವಸಂತಿ ಗುಂಡಿಜಾಲು, ಕೋಶಾಧಿಕಾರಿ ಮಾಲತಿ ಮಡಕ್ಕಿಲ ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.

ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಕಾಂತ ನಿಡ್ಡಜೆ ಕಾರ್ಯಕ್ರಮ ನಿರೂಪಿಸಿದರು.ವಸಂತ ಮರಕಡ ಪ್ರಸ್ತಾವಿಕ ದೊಂದಿಗೆ ಸ್ವಾಗತಿಸಿದರು.ಸುಕುಮಾರ್ ಧನ್ಯವಾದ ಕೋರಿದರು.

ವರದಿ ಹರ್ಷ ಬಳ್ಳಮಂಜ

LEAVE A REPLY

Please enter your comment!
Please enter your name here