ಉಜಿರೆ: ಶ್ರೀ ಧ.ಮಂ.ಅ ಶಾಲೆಯಲ್ಲಿ ನ್ಯಾಷನಲ್ ಗ್ರಾಮರ್ ಡೇ 

0

ಉಜಿರೆ: ಶ್ರೀ ಧ.ಮಂ.ಅ ಶಾಲೆಯಲ್ಲಿ ನ್ಯಾಷನಲ್ ಗ್ರಾಮರ್ ಡೇ  ಆಯೋಜಿಸಲಾಯಿತು.

ಮಕ್ಕಳ ಪ್ರಾರ್ಥನಾ ಗೀತೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮವನ್ನು ಎಸ್.ಡಿ.ಎಂ ಸ್ನಾತಕೋತ್ತರ ಸಂಸ್ಥೆಯ ಉಪನ್ಯಾಸಕಿ ಡಾ.ಮಂಜುಶ್ರೀ ಅವರು ದೀಪ ಪ್ರಜ್ವಲಿಸಿ ಮಕ್ಕಳಿಂದ ರಚಿತವಾದ ಬಿತ್ತಿ ಪತ್ರವನ್ನು ಬಿಡುಗಡೆಗೊಳಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಉದ್ಘಾಟಿಸಿ ಮಾತನಾಡಿದ ಅವರು “ವ್ಯಾಕರಣ ದಿನ ಎಂಬುದು ಕೇವಲ ಒಂದು ಭಾಷೆಗೆ ಸೀಮಿತವಾಗಿರದೆ ನಾಡಿನ ಎಲ್ಲಾ ಭಾಷೆಗೂ ಪ್ರಾಮುಖ್ಯತೆಯನ್ನು ಗೌರವವನ್ನು ಒದಗಿಸುವ ಕಾರ್ಯಕ್ರಮವಾಗಿದೆ. ಭಾಷಾ ನಿರರ್ಗಳತೆಗೆ  ವ್ಯಾಕರಣದ ಜ್ಞಾನ  ಅತ್ಯಗತ್ಯ.ಭಾಷೆಗೆ ವ್ಯಾಕರಣವೇ ಅಡಿಪಾಯ.

ಹಾಗಾಗಿ ಪ್ರಾರ್ಥಮಿಕ ಹಂತದಲ್ಲೇ ವ್ಯಾಕರಣದ ಎಲ್ಲಾ ವಿಭಾಗದಲ್ಲೂ ಪರಿಪಕ್ವತೆಯನ್ನು ಸಾಧಿಸಿದರೆ ಮುಂದೆ ಕಲಿಕೆ ಸುಗಮವಾಗುತ್ತದೆ” ಎಂದು ತಿಳಿಸಿದರು.

ಶಾಲಾ ಮುಖ್ಯ ಶಿಕ್ಷಕ ಬಾಲಕೃಷ್ಣ ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಒಂದರಿಂದ ಏಳನೇ ತರಗತಿವರೆಗಿನ ವಿದ್ಯಾರ್ಥಿಗಳಿಂದ ರಚಿತವಾದ ವ್ಯಾಕರಣ ಸಂಬಂಧಿ  ಸುಮಾರು 100 ಬಿತ್ತಿ ಪತ್ರಗಳು ಪ್ರದರ್ಶನಗೊಂಡವು.

ಕಾರ್ಯಕ್ರಮದ ಸಂಯೋಜಕೀ ಸಹ ಶಿಕ್ಷಕಿ ಜ್ಯೋತಿ ಸರ್ವರನ್ನ ಸ್ವಾಗತಿಸಿದರು.ವಿದ್ಯಾರ್ಥಿನಿ ಕುಮಾರಿ ಅಯೀಷ ರಾಹಿಲಾ ಧನ್ಯವಾದವಿತ್ತರು.ಸಪ್ತಮಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here