ಮುಂಡಾಜೆ ಬಂಟರ ಸಂಘ ಗ್ರಾಮ ಸಮಿತಿ ಮಾಸಿಕ ಸಭೆ

0

ಮುಂಡಾಜೆ: ಮುಂಡಾಜೆ ಬಂಟರ ಗ್ರಾಮ ಸಮಿತಿ ಇದರ ಮಾರ್ಚ್ ತಿಂಗಳ ಮಾಸಿಕ ಸಭೆಯು ಸಂಚಾಲಕ ವಿಶ್ವನಾಥ ಶೆಟ್ಟಿ ಮುಂಡ್ರುಪಾಡಿ ರವರ ಮನೆಯಲ್ಲಿ ಮಾ.3ರಂದು ನಡೆಯಿತು.

ಗ್ರಾಮ ಸಮಿತಿಯ ಅಧ್ಯಕ್ಷರಾದ ಪುರುಷೋತ್ತಮ ಶೆಟ್ಟಿ ಅಗರಿ ರವರು ಬಂಟರು ಅನುಸರಿಸಬೇಕಾದ ಸರಳ ಬದುಕಿನ ಅನಿವಾರ್ಯತೆಗಳ ಬಗ್ಗೆ ಮಾತನಾಡಿದರು.

ವೇದಿಕೆಯಲ್ಲಿ ಗೌರವಾಧ್ಯಕ್ಷ ರಾಮಣ್ಣ ಶೆಟ್ಟಿ ಅಗರಿ ಇವರು ಬಂಟರಲ್ಲಿರುವ ನಾಯಕತ್ವ ಗುಣವನ್ನು ಉಳಿಸಿಕೊಂಡು ಬರುವುದರ ಬಗ್ಗೆ ಮನವರಿಕೆ ಮಾಡಿಕೊಟ್ಟರು.

ಸಂಚಾಲಕ ವಿಶ್ವನಾಥ ಶೆಟ್ಟಿ ಇವರು ಮಾತನಾಡಿ ಗ್ರಾಮ ಸಮಿತಿ ಉತ್ತಮವಾಗಿ ಕಾರ್ಯನಿರ್ವಹಿಸುವುದನ್ನು ಮೆಚ್ಚಿದರು.ವೇದಿಕೆಯಲ್ಲಿ ಉಪಾಧ್ಯಕ್ಷೆ ಭವಾನಿ ಶೆಟ್ಟಿ, ಸುರೇಖಾ ವಿಶ್ವನಾಥ ಶೆಟ್ಟಿ ಇವರು ಉಪಸ್ಥಿತರಿದ್ದರು.

ಕಾರ್ಯದರ್ಶಿ ವಿಜಯಕುಮಾರ್ ರೈ ಇವರು ವಂದಿಸಿದರು.

ಗ್ರಾಮ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಸರ್ವ ರೀತಿಯ ಪ್ರೋತ್ಸಾಹ ನೀಡಿದರು.

LEAVE A REPLY

Please enter your comment!
Please enter your name here