ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ

0

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನವನ್ನು ಶಾಸಕ ಹರೀಶ್ ಪೂಂಜಾ ರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಎಂ ಅನಂತ ಭಟ್, ಇತರೇ ರೋಟರಿ ಕ್ಲಬ್ ಸದಸ್ಯರುಗಳು, ಡಾ.ಸಂಜಾತ್ ಆರ್ ಬಿ , ಡಾ.ಚಂದ್ರಕಾಂತ್, ಇತರೇ ವೈದ್ಯ- ಸಿಬ್ಬಂದಿ ಹಾಜರಿದ್ದರು.

ತಾಲೂಕಿನಲ್ಲಿ 18,483 ಮಕ್ಕಳಿಗೆ ಲಸಿಕೆ ನೀಡುವ ಗುರಿಯಿತ್ತು. ಇಂದು ಒಟ್ಟು 17,558 ಮಕ್ಕಳಿಗೆ ಲಸಿಕೆ ನೀಡಲಾಗಿದ್ದು 95 % ಗುರಿ ಸಾಧಿಸಲಾಗಿದೆ.

ಹಾಗೂ ಉಳಿದ ಮಕ್ಕಳಿಗೆ ಲಸಿಕೆ ನೀಡಲು ನಾಳೆ ಮತ್ತು ಮಂಗಳವಾರ ಮನೆ ಭೇಟಿಯಲ್ಲಿ ಲಸಿಕೆದಾರರು ಬಂದಾಗ ಪೋಲಿಯೊ ಲಸಿಕೆ ಕೊಡಿಸಿ ಸಹಕರಿಸಲು ವಿನಂತಿಸಿದ್ದಾರೆ.

ಲಸಿಕಾ ಅಭಿಯಾನದಲ್ಲಿ ಪಾಲ್ಗೊಂಡ ಎಲ್ಲಾ ಪೋಷಕರಿಗೂ , ಸಹಾಕರಿಸಿದ ಆರೋಗ್ಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರಿಗೆ ತಾಲೂಕು ಅರೋಗ್ಯಾಧಿಕಾರಿ ಡಾ. ಪ್ರಕಾಶ್ ಕೃತಜ್ಞತೆಯನ್ನು ಪ್ರಕಟಣೆಯಲ್ಲಿ ತಿಳಿಸಿದರು.

LEAVE A REPLY

Please enter your comment!
Please enter your name here