ಎಸ್.ಡಿ.ಎಂ ನ್ಯಾಚುರೋಪತಿಗೆ ಆರ್.ಜಿ.ಯು.ಹೆಚ್.ಎಸ್‌ನ ಗೋಲ್ಡ್ ಮೆಡಲ್

0

ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ 2017-18ನೇ ಸಾಲಿನ ವಿದ್ಯಾರ್ಥಿ ಡಾ.ಗೋವಿನದನ್ ಪಿ ಪ್ರತೀ ಶೈಕ್ಷಣಿಕ ವರ್ಷದಲ್ಲಿ ಗರಿಷ್ಠ ಅಂಕ ಗಳಿಸಿ ಫೆ.26ರಂದು ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ 26ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕವನ್ನು ಕುಲಾಧಿಪತಿಗಳಾದ ಕರ್ನಾಟಕದ ಘನತೆವೆತ್ತ ರಾಜ್ಯಪಾಲರಾದ ಶ್ರೀ. ಥಾವರ್ ಚಂದ್ ಗೆಹ್ಲೂಟ್ ಇವರು, ರಾಷ್ಟ್ರೀಯ ವೈದ್ಯಕೀಯ ಆಯೋಗ, ನವದೆಹಲಿ ಇದರ ಅಧ್ಯಕ್ಷರಾದ, ಡಾ.ಬಿ.ಎನ್.ಗಂಗಾಧರ್, ಕರ್ನಾಟಕದ ವ್ಯೆದ್ಯಕೀಯ ಶಿಕ್ಷಣ ಸಚಿವರಾದ ಹಾಗೂ ವಿಶ್ವವಿದ್ಯಾನಿಲಯದ ಸಮ ಕುಲಾಧಿಪತಿಗಳಾದ ಡಾ.ಶರಣ ಪ್ರಕಾಶ್ ಆರ್ ಪಾಟಿಲ್ ಮತ್ತು ವಿಶ್ವವಿದ್ಯಾನಿಲಯದ ಉಪಕುಲಪತಿಗಳು ಹಾಗೂ ಕುಲಸಚಿವರ ಸಮ್ಮುಖದಲ್ಲಿ ಪ್ರದಾನ ಮಾಡಿದರು.

ಎಸ್.ಡಿ.ಎಂ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ, ಡಾ.ಡಿ.ವಿರೇಂದ್ರ ಹೆಗ್ಗಡೆಯವರು ಸಂತಸ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಯು ನಮ್ಮ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಮುಂದುವರಿಯುತ್ತಿದ್ದು ಅವರ ಶೈಕ್ಷಣಿಕ ವೆಚ್ಚ್ಕವನ್ನು ಸಂಪೂರ್ಣ ಉಚಿತವಾಗಿ ನೀಡುವುದಾಗಿ ತಿಳಿಸಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರಶಾಂತ್ ಶೆಟ್ಟಿಯವರು ತಿಳಿಸಿರುತ್ತಾರೆ.

p>

LEAVE A REPLY

Please enter your comment!
Please enter your name here