

ಕಾಶಿಬೆಟ್ಟು: ಕಾಶಿಬೆಟ್ಟು ರೋಟರಿ ಕ್ಲಬ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳ್ತಂಗಡಿ ಹಾಗೂ ನೋವಾ ಐ.ವಿ.ಎಫ್ ಮಂಗಳೂರು ಇದರ ಸಹಭಾಗಿತ್ವದಲ್ಲಿ ಬಂಜೆತನದ ಬಗ್ಗೆ ಉಚಿತ ಮಾಹಿತಿ ಮತ್ತು ಸಮಾಲೋಚನಾ ಶಿಬಿರ ಮಾ.2ರಂದು ರೋಟರಿ ಸೇವಾ ಭವನ ಕಾಶಿಬೆಟ್ಟುನಲ್ಲಿ ನಡೆಯಿತು.

ನೋವಾ ಐ.ವಿ.ಎಫ್ ವೈದ್ಯರಾದ ಚಾವೆಜ್ ಫೈಜ್, ಶಬೀತಾ, ಹರ್ಷ, ಗೌತಮಿ, ರಶ್ಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಧಿಕಾರಿ ಪ್ರೀಯಾ, ರೋಟರಿ ಅಬ್ಬೂಕ್ಕರ್, ಹಾಗೂ ರೋಟರಿ ಉಮಾರಾವ್ ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಕಾರ್ಯದರ್ಶಿ ವಿದ್ಯಾಕುಮಾರ್ ಸ್ವಾಗತಿಸಿ, ದನ್ಯವಾದವಿತ್ತರು.