

ಬೆಳ್ತಂಗಡಿ : ದ. ಕ. ರೈತ ಸಂಘಗಳ ಒಕ್ಕೂಟದ ವತಿಯಿಂದ ದ. ಕ. ಜಿಲ್ಲೆಯಲ್ಲಿ ಅಡಿಕೆಯ ಆಮದುನಿಂದ ಅಡಿಕೆ ಬೆಳೆ ಕುಸಿದು ರೈತರು ಸಂಕಷ್ಟದ ಪರಿಸ್ಥಿತಿ ಎದುರುಸುತ್ತಿದ್ದಾರೆ.
ಅಡಿಕೆ ಆಮದು ಮತ್ತು ಕಳ್ಳ ಮಾರ್ಗವಾಗಿ ಅಡಿಕೆ ಆಮದು ಆಗುತ್ತಿರುವ ವಿರೋಧಿಸಿ ಮಾ.7ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ದ. ಕ.ರೈತ ಸಂಘಗಳ ಒಕ್ಕೂಟದ ಅಧ್ಯಕ್ಷ ಓಸ್ವಾಲ್ಡ್ ಫೆರ್ನಾಂಡಿಸ್ ಹೇಳಿದರು.
ಅವರು ಮಾ.2 ರಂದು ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.ಸರಕಾರಗಳು ಬಂಡವಾಳ ಶಾಹಿಗಳ ಕಪಿಮುಷ್ಟಿಯಲ್ಲಿ ಇದ್ದು ರೈತರನ್ನು ತುಳಿಯುವ ಕೆಲಸ ಮುಂದುವರಿಸುತ್ತಾ ಇದ್ದಾರೆ.ಅಡಿಕೆ ಹಾಗೂ ತೆಂಗಿನ ಅಮದನ್ನು ಸಂಪೂರ್ಣ ನಿಷೇಧಿಸಬೇಕು, ಕಾರ್ಪೋರೇಟ್ ಕಂಪನಿಗಳ 14ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ಸರಕಾರದ ತಪ್ಪು ನೀತಿಯಿಂದ ರೈತರು ಸಾಲಗಾರರಾಗಿದ್ದಾರೆ ಆದುದರಿಂದ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು.ದೆಹಲಿಯ ಗಡಿ ಪ್ರದೇಶದಲ್ಲಿ ಹೋರಾಟ ನಡೆಸುವ ರೈತರ ಮೇಲಿನ ದೌರ್ಜನ್ಯವನ್ನು ಕೂಡಲೇ ನಿಲ್ಲಿಸಬೇಕು, ರೈತ ವಿರೋಧಿ ಕಾಯ್ದೆ ಹಿಂದಕ್ಕೆ ಪಡೆಯಬೇಕು, ಆತ್ಮಹತ್ಯೆ ಮಾಡಿಕೊಂಡ ರೈತರಿಗೂ ರೂ.25 ಲಕ್ಷ ಸಹಾಯಧನ ನೀಡಬೇಕು, ಎಲೆಚುಕ್ಕಿ, ಹಳದಿ ಎಲೆ ರೋಗ ಭಾದಿತ ರೈತರಿಗೆ ಪ್ರತಿ ಎಕ್ರೆಗೆ 25000 ಸಹಾಯಧನ ನೀಡಬೇಕು, ಬಂಟ್ವಾಳದಿಂದ ಹಾದುಹೋಗುವ 400 ಕೆ ವಿ ವಿದ್ಯುತ್ ಮಾರ್ಗವನ್ನು ಸ್ಟಾಳಂತರ ಮಾಡಬೇಕು ಮೊದಲಾದ ಮುಖ್ಯ ಬೇಡಿಕೆಗಳಿಗೆ ಪ್ರತಿಭಟನೆ ನಡೆಯಲಿದೆ.
ಅಂದು ಮಧ್ಯಾಹ್ನ ಬಿ. ಸಿ ರೋಡಿನಿಂದ ಟ್ಯಾಕ್ಟರ್ ಮತ್ತು ವಾಹನ ಜಾಥಾದ ಮೂಲಕ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಲಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಸಂಯೋಜಕ ಸನ್ನಿ ಡಿಸೋಜ, ಸುರೇಶ್ ಭಟ್ ಕೊಜಂಬೆ, ಕೆ. ಎಂ.ರಮಲ ಉಪಸ್ಥಿತರಿದ್ದರು.