ಹಳೆಪೇಟೆ: ಉಜಿರೆಯ ಹಳೇಪೇಟೆಯ ಮುಖ್ಯರಸ್ತೆಯಲ್ಲಿ ಶಿವಮೊಗ್ಗ ಮೂಲದ ಯುವತಿಯೊಬ್ಬಳು ಅಳುತ್ತಾ ರಸ್ತೆ ಬದಿಯಲ್ಲಿ ಕುಳಿತಿದ್ದಳು.
ಹಳೆಪೇಟೆಯ ಖಾಸಗಿ ಲಾಡ್ಜ್ ಮುಂದೆ ಯುವತಿ ಅಳುತ್ತಿರುವುದನ್ನು ಸ್ಥಳೀಯರು ಗಮನಿಸಿ ವಿಚಾರಿಸುತ್ತಿದ್ದಾಗ ಮಾಹಿತಿ ಪಡೆದು ಬಂದ ಪೊಲೀಸರು ಯುವತಿಯನ್ನು ಬೆಳ್ತಂಗಡಿ ಠಾಣೆಗೆ ಕರೆತಂದಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಆಕೆ ದಾಖಲೆಪತ್ರಗಳು ಕಳೆದುಹೋಗಿರುವ ಮಾಹಿತಿ ಇದೆಯೆಂದು ಪೊಲೀಸ್ ಮೂಲಗಳು ತಿಳಿಸಿವೆ.ಆದರೆ,ಖಾಸಗಿ ಲಾಡ್ಜ್ ಮುಂಭಾಗದಲ್ಲಿ ಯುವತಿಯಿದ್ದ ಕಾರಣ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದ್ದು, ಯುವತಿ ಶಿವಮೊಗ್ಗದವಳೆಂದು ಮಾತ್ರ ತಿಳಿದುಬಂದಿದೆ.
ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
p>