ಕೊಕ್ಕಡದ ಕಿಟ್ಟ ಮಲೆಕುಡಿಯ ಕುರ್ಲೆ ಇವರಿಗೆ ಕರ್ನಾಟಕ ಜಾನಪದ ಪರಿಷತ್ ಪ್ರಶಸ್ತಿ

0

ಕೊಕ್ಕಡ: ಕಿಟ್ಟ ಮಲೆಕುಡಿಯ ಇವರು ಪ್ರಸ್ತುತ ಕೊಕ್ಕಡ ಗ್ರಾಮದ ಕುರ್ಲೆ ಎಂಬಲ್ಲಿ ವಾಸಿಸುತ್ತಿದ್ದು ತನ್ನ 10ನೇ ವಯಸ್ಸಿನಲ್ಲಿ ಸುಗ್ಗಿ ಪುರುಷರ ಕೂಟದಲ್ಲಿ ಭಾಗಿಯಾಗುತ್ತಿದ್ದರು.ತನ್ನ 15ನೇ ವಯಸ್ಸಿನಿಂದ ಸುಗ್ಗಿ ಪುರುಷರ ಕೂಟದಲ್ಲಿ ವೇಷ ಧರಿಸಲು ಆರಂಭಿಸಿದ ಇವರು ಧರ್ಮಸ್ಥಳದ ಪುರುಷರ ಕೂಟದಲ್ಲೂ ಸೇವೆ ಸಲ್ಲಿಸಿದ್ದಾರೆ.

ಮೊದಲು ಪಾರ್ಪಿಕಲ್ಲು ನಂತರ ಧರ್ಮಸ್ಥಳ ಹಾಗೂ ಪಟ್ರಮೆ ಭಾಗದಲ್ಲಿ ಸುಗ್ಗಿ ಪುರುಷರ ಕೂಟದಲ್ಲಿ ಸೇವೆ ಸಲ್ಲಿಸಿದ ಇವರು ಪ್ರಸ್ತುತ ಮುಂಡೂರುಪಳಿಕೆ ಸುಗ್ಗಿ ಪುರುಷರ ಕೂಟದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರಿಗೆ ಕರ್ನಾಟಕ ಜಾನಪದ ಪರಿಷತ್ ಪ್ರಶಸ್ತಿ ಮಾರ್ಚ್ 3ರಂದು ಮಂಗಳೂರಿನಲ್ಲಿ ನಡೆಯುವ ಜಾನಪದ ಕಡಲೋತ್ಸವ ಕಾರ್ಯಕ್ರದಲ್ಲಿ ಪ್ರದಾನವಾಗಲಿದೆ.

LEAVE A REPLY

Please enter your comment!
Please enter your name here