ಆಗ್ನೆಯ ಏಷ್ಯಾ ಮಾಧ್ಯಮ ಸಮ್ಮೇಳನಕ್ಕೆ ಕೊಕ್ಕಡದ ಸಿಬಂತಿ ಪದ್ಮನಾಭ

0

ಬೆಳ್ತಂಗಡಿ: ಮಲೇಷ್ಯಾದ ಕೌಲಾಲಂಪುರದಲ್ಲಿ ಫೆ.29ರಿಂದ ಮಾರ್ಚ್ 2ರವರೆಗೆ ನಡೆಯಲಿರುವ ಆಗ್ನೆಯ ಏಷ್ಯಾ ಮಾಧ್ಯಮ ಅಧ್ಯಯನ ಸಮ್ಮೇಳನದಲ್ಲಿ ತುಮಕೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ.ಕೆ.ವಿ.ಸಿಬಂತಿ ಪದ್ಮನಾಭ ಭಾಗವಹಿಸಲಿದ್ದಾರೆ.

‘ಆಗ್ನೆಯ ಏಷ್ಯಾ ರಾಷ್ಟ್ರಗಳಲ್ಲಿ ಮಾಧ್ಯಮ, ಸುಸ್ಥಿರತೆ, ಅಭಿವೃದ್ಧಿ ಮತ್ತು ಪ್ರಭುತ್ವದ ಚರ್ಚೆಗಳು’ ಎಂಬ ವಿಷಯದ ಮೇಲೆ ನಡೆಯುವ ಈ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆಗ್ನೆಯ ಏಷ್ಯಾ ಮಾಧ್ಯಮ ಅಧ್ಯಯನ ಸಂಘಟನೆ ಹಾಗೂ ಸನ್‌ವೇ ವಿಶ್ವವಿದ್ಯಾಲಯ ಜಂಟಿಯಾಗಿ ಆಯೋಜಿಸುತ್ತಿವೆ.ಸಮ್ಮೇಳನದಲ್ಲಿ ಪದ್ಮನಾಭ ಅವರು ‘ಮಹಿಳಾ ಸಬಲೀಕರಣದ ವೇದಿಕೆಯಾಗಿ ಸಾಂಪ್ರದಾಯಿಕ ರಂಗಭೂಮಿ ಯಕ್ಷಗಾನದ ಒಂದು ಅಧ್ಯಯನ’ ಕುರಿತು ಸಂಶೋಧನ ಪ್ರಬಂಧ ಮಂಡಿಸಲಿದ್ದಾರೆ.

ಸಿಬಂತಿ ಪದ್ಮನಾಭರವರು ಮೂಲತಃ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸಿಬಂತಿಯವರಾಗಿದ್ದು, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ.ಕಿ.ಪ್ರಾ. ಶಾಲೆ ಮುಂಡೂರುಪಳಿಕೆ ಹಾಗೂ ಪಟ್ಟೂರಿನ ಶ್ರೀ ವಿಷ್ಣುಮೂರ್ತಿ ಅ.ಹಿ.ಪ್ರಾ.ಶಾಲೆಯಲ್ಲಿ ಪಡೆದಿರುತ್ತಾರೆ.

LEAVE A REPLY

Please enter your comment!
Please enter your name here