ಕಾಯರ್ತಡ್ಕ: ಶ್ರೀ ಉಮಾಮಹೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಫೆ.25ರಂದು ನಡೆಯಿತು.
ಬೆಳಿಗ್ಗೆ 8.30ಕ್ಕೆ ಗಣಹೋಮ, ನವಕ ಬಳಿಕ ಗ್ರಾಮಸ್ಥರಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಿತು.10.30ಕ್ಕೆ ಯುವಶಕ್ತಿ ಕಾಯರ್ತಡ್ಕ ಆಯೋಜನೆಯಲ್ಲಿ ಪ್ರಖರ ವಾಗ್ಮಿ ವೇದಮೂರ್ತಿ ಪುತ್ತೂರು ಶ್ರೀ ಕೃಷ್ಣ ಉಪಾಧ್ಯಯರ ಸಾರತ್ಯದಲ್ಲಿ ಭಾವಸಂಗಮ ಕಾರ್ಯಕ್ರಮ ನಡೆಯಿತು.ಮದ್ಯಾಹ್ನ ಮಹಾಪೂಜೆಯ ನಂತರ ಅನ್ನಸಂತರ್ಪಣೆ ನಡೆದು ಸಾವಿರಾರು ಭಕ್ತರು ದೇವರ ಭೋಜನಪ್ರಸಾದ ಸ್ವೀಕರಿಸಿ ಕೃಪೆಗೆ ಪಾತ್ರರಾದರು.
ಸಾಯಂಕಾಲ ತಾಯಂಬಿಕ, ರಂಗಪೂಜೆ ಬಳಿಕ ದೇವರ ಭೂತ ಬಲಿ ಉತ್ಸವ, ಕಟ್ಟೆಪೂಜೆ, ಬೇಡಿಸೇವೆ, ನೃತ್ಯೋತ್ಸವ ನಂತರ ಅನ್ನಸಂತರ್ಪಣೆ ನಡೆದು ರಾತ್ರಿ 10ಗಂಟೆಗೆ ವೈಷ್ಣವಿ ಶಿಶುಮಂದಿರದ ಮತ್ತು ಬಾಲಗೋಕುಲ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಫೆ 26ರಂದು ಬೆಳಿಗ್ಗೆ 10ಗಂಟೆಗೆ ಉತ್ಸವ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಂಗಣ ಪ್ರಸಾದ ವಿತರಣೆ ಬಳಿಕ ಮಧ್ಯಾಹ್ನದ ಅನ್ನಸಂತರ್ಪಣೆ ನಡೆಯಿತು.
ಈ ಸಂಧರ್ಭದಲ್ಲಿ ವೇ.ಗುರುರಾಜ ಶಬರಾಯ ಅರ್ಚಕರು, ಮೊಕ್ತೇಸರರಾದ ನೋಣಯ್ಯ ಗೌಡ ಎಲಿಮಾರು, ಅಧ್ಯಕ್ಷ ಮೋಹನ ಗೌಡ ಪುತ್ಯೆ, ಕಾರ್ಯದರ್ಶಿ ವಸಂತ ಮರಕಡ, ಕೋಶಧಿಕಾರಿ ಶಿವಪ್ಪಗೌಡ ನೆಲ್ಲಿಕಟ್ಟೆ ಮತ್ತು ಸರ್ವಸದಸ್ಯರು ಹಾಗೂ ಊರವರು ಸೇರಿ ಜಾತ್ರಾ ಮಹೋತ್ಸವ ಯಶಸ್ವಿಗೊಳಿಸಿದರು.