ಸುಲ್ಕೇರಿ ಶ್ರೀ ಗುರುನಾರಾಯಣ ಸೇವಾ ಸಮಿತಿಯಲ್ಲಿ ಗುರುಪೂಜೆ

0

ಸುಲ್ಕೇರಿ: ಬ್ರಹ್ಮ ಶ್ರೀ ಗುರುನಾರಾಯಣ ಸೇವಾ ಸಮಿತಿ, ಬ್ರಹ್ಮಗಿರಿ, ಸುಲ್ಕೇರಿ ಇವರ ಪ್ರಥಮ ವರ್ಷದ ಗುರುಪೂಜೆ, ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆಯು ಸುಲ್ಕೇರಿ ಗ್ರಾಮದ ಬ್ರಹ್ಮಗಿರಿಯಲ್ಲಿ ನಡೆಯಿತು.

ನಾರಾಯಣ ಗುರುಗಳ ಜೀವನ ಚರಿತ್ರೆಯನ್ನು ಉಲ್ಲೇಖಿಸುತ್ತಾ ಇಂದಿನ ಯುವಪೀಳಿಗೆ ಗುರುಗಳ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು. ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಕೈಜೋಡಿಸಬೇಕೆಂದು ಬೆಳ್ತಂಗಡಿ ಯುವಬಿಲ್ಲವ ವೇದಿಕೆಯ ಅಧ್ಯಕ್ಷ ಎಂ.ಕೆ.ಪ್ರಸಾದ್ ರವರು ಹೇಳಿದರು.

ಬೆಳ್ತಂಗಡಿ ತಾಲೂಕು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ ಕಲ್ಲಾಪು ದೀಪ ಪ್ರಜ್ವಲಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತೃ ಸಂಘದಿಂದ ಮಂಜೂರಾದ 2 ಅಶಕ್ತ ಕುಟುಂಬಗಳಿಗೆ ತಲಾ 5000/- ದಂತೆ ಒಟ್ಟು 10000/- ಮೊತ್ತದ ಸಹಾಯಧನ ವಿತರಿಸಿದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಸುಲ್ಕೇರಿಯ ಬಿಲ್ಲವ ಸಂಘದ ಅಧ್ಯಕ್ಷ ಕೊಗ್ಗ ಯಾನೆ ಕೊರಗಪ್ಪ ಪೂಜಾರಿ ಗ್ರಾಮದ ಗುತ್ತು ಬರ್ಕೆ ಮತ್ತು ಇತರ ಸಂಘ ಸಂಸ್ಥೆಯ ಮುಖ್ಯಸ್ಥರನ್ನು ಸನ್ಮಾನಿಸಿ ಎಲ್ಲಾರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಅಳದಂಗಡಿ ವಲಯ ಅಧ್ಯಕ್ಷ ಸಂಜೀವ ಪೂಜಾರಿ ಕೊಡಂಗೆ, ಸುಲ್ಕೇರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗಿರಿಜಾ, ಸುಲ್ಕೇರಿ ಬಿಲ್ಲವ ಸಂಘದ ಗೌರವ ಅಧ್ಯಕ್ಷ ಸುಧೀರ್ ಎಸ್.ಪಿ , ಸುಲ್ಕೇರಿಯ ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಲಲಿತಾ ಭಂಡಾರಿಗೋಳಿ, ಸುಲ್ಕೇರಿ ಗ್ರಾಮ ಪಂಚಾಯತಿನ ನಿಕಟಪೂರ್ವ ಅಧ್ಯಕ್ಷ ನಾರಾಯಣ ಪೂಜಾರಿ, ತಾಲೂಕು ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ಸುಮತಿ ಪ್ರಮೋದ್, ಕುದ್ಯಾಡಿ ಗ್ರಾಮ ಸಮಿತಿಯ ಅಧ್ಯಕ್ಷ ವಿಶ್ವನಾಥ ಪೂಜಾರಿ, ಪಿಲ್ಯಾ ಗ್ರಾಮ ಸಮಿತಿ ಅಧ್ಯಕ್ಷ ಕೊರಗಪ್ಪ ಪೂಜಾರಿ, ಸುಲ್ಕೇರಿ ಮೊಗ್ರು ಗ್ರಾಮ ಸಮಿತಿಯ ಅಧ್ಯಕ್ಷ ಸಂಕೇತ್ ಪೂಜಾರಿ, ನಾವರ ಗ್ರಾಮ ಸಮಿತಿ ಅಧ್ಯಕ್ಷ ನವೀನ್ ಪೂಜಾರಿ, ಕುತ್ಲುರು ಗ್ರಾಮ ಸಮಿತಿಯ ಅಧ್ಯಕ್ಷ ರೋಹನ ಪೂಜಾರಿ, ಸುಲ್ಕೇರಿ ಬಿಲ್ಲವ ಸಂಘದ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳಾದ ಶಂಕರ ಪೂಜಾರಿ, ಯಶೋಧರ ಪೂಜಾರಿ, ಕೆ.ಬಿ ಪ್ರದೀಪ್, ಹರೀಶ್ ಪೂಜಾರಿ, ವಸಂತ ಪೂಜಾರಿ, ಸುಜಯ್ ಕೆ.ಹೆಚ್ ಕೋಟ್ಯಾನ್, ರಮೇಶ್ ಪೂಜಾರಿ, ಕೀರ್ತನ್ ಪೂಜಾರಿ, ಸುನಿಲ್ ಪೂಜಾರಿ, ಪ್ರವೀಣ್ ಪೂಜಾರಿ, ಗುರುರಾಜ್ ಪೂಜಾರಿ, ಪ್ರಕಾಶ್ ಪೂಜಾರಿ ಉಪಸ್ಥಿತರಿದ್ದರು.

ವಿಶ್ವನಾಥ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ವಸಂತಿ ರವರು ವರದಿ ವಾಚಿಸಿದರು, ಕಾರ್ಯದರ್ಶಿ ಡೀಕಯ್ಯ ಪೂಜಾರಿ ಸ್ವಾಗತಿಸಿದರು, ಶ್ವೇತಾ ನಾರಾಯಣ ಪೂಜಾರಿ ವಂದಿಸಿದರು.

LEAVE A REPLY

Please enter your comment!
Please enter your name here