ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಮಾಸಿಕ ಸಭೆ

0

ಬಡಕೋಡಿ: ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಫೆಬ್ರವರಿ ತಿಂಗಳ ಮಾಸಿಕ ಸಭೆ ಸಂಘದ ಕ್ರೀಡಾ ಕಾರ್ಯದರ್ಶಿ ರವಿ ನಾಯ್ಕ ಬಡಕೋಡಿರವರ ನಿವಾಸದಲ್ಲಿ ಪಡೆಯಿತು.

ಸಂಘದ ಅಧ್ಯಕ್ಷ ಉಮೇಶ್ ನಾಯ್ಕ ಕೇಳಡ್ಕರವರು ಅಧ್ಯಕ್ಷತೆ ವಹಿಸಿದ್ದರು.ಸಂಘದ ಪ್ರಧಾನ ಕಾರ್ಯದರ್ಶಿ ತಾರನಾಥ ನಾಯ್ಕರವರು ವರದಿ ವಾಚಿಸಿದರು.

ಮೇ.12ಕ್ಕೆ ಸಂಘದ ಮಹಾಸಭೆ ನಡೆಸುವುದು, ಮಹಾಸಭೆಯಲ್ಲಿ ಮುಂದಿನ ಮೂರು ವರ್ಷಕ್ಕೆ ನೂತನ ಕಾರ್ಯಕಾರಿ ಸಮಿತಿ ರಚಿಸುವುದು, ಮಾ.17ಕ್ಕೆ ಶೃಂಗೇರಿ ಯಾತ್ರೆ ಕೈಗೊಳ್ಳುವುದು ಮೊದಲಾದ ನಿರ್ಣಯಗಳನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

ಉಪಾಧ್ಯಕ್ಷ ಸತೀಶ್ ಹೆಚ್.ಎಲ್, ಕಾರ್ಯದರ್ಶಿ ಪ್ರಸಾದ್ ನಾಯ್ಕ, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಶ್ರೀನಿವಾಸ ನಾಯ್ಕ, ಪವಿತ್ರಾ ಲೋಕೇಶ್, ಕಾರ್ಯಕಾರಿ ಸಮಿತಿ ಸದಸ್ಯರಾದ ಚಂದ್ರಾವತಿ, ರಾಘವೇಂದ್ರ ನಾಯ್ಕ, ಸುರೇಶ್ ಹೆಚ್.ಎಲ್ ಉಪಸ್ಥಿತರಿದ್ದರು.

ಕ್ರೀಡಾ ಕಾರ್ಯದರ್ಶಿ ರವಿ ನಾಯ್ಕರವರು ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here