ಪುತ್ತೂರು: ಬಹು ನಿರೀಕ್ಷಿತ ಗ್ರಾಮ ಆಡಳಿತ ಅಧಿಕಾರಿ (V.A.O) ಹುದ್ದೆಯ ನೇಮಕಾತಿ ಪ್ರಕ್ರಿಯೆಯು ಪ್ರಾರಂಭವಾಗಿದ್ದು, ವಿದ್ಯಾಮಾತಾ ಅಕಾಡೆಮಿಯು ಮಾ.10ರಿಂದ ಈ ನೇಮಕಾತಿ ಪರೀಕ್ಷೆಗೆ ಪೂರ್ವ ತಯಾರಿ ತರಗತಿಗಳು ಆರಂಭವಾಗಲಿದೆ.
ಅಕಾಡೆಮಿಯಲ್ಲಿ ತರಗತಿಗಳು ಆನ್ಲೈನ್(ರಾತ್ರಿ 8ರಿಂದ 9)ಮತ್ತು ನೇರ ತರಗತಿ(ಬೆಳಿಗ್ಗೆ 10ರಿಂದ ಮದ್ಯಾಹ್ನ 1ರವರೆಗೆ)ಯ ಮೂಲಕ ನುರಿತ ಭೋದಕ ತಂಡದಿಂದ ನಡೆಯಲಿದೆ. ಈ ತರಬೇತಿಯನ್ನು ಪಡೆಯಲಿಚ್ಚಿಸುವ ಆಭ್ಯರ್ಥಿಗಳು ನೇರವಾಗಿ ವಿದ್ಯಾಮಾತಾ ಅಕಾಡೆಮಿ ಇದರ ಪುತ್ತೂರು ಅಥವಾ ಸುಳ್ಯ ಕಛೇರಿಯನ್ನು ಕೂಡಲೇ ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳುವಂತೆ ಅಕಾಡೆಮಿ ಪ್ರಕಟಣೆ ತಿಳಿಸಿದೆ.
ನೇಮಕಾತಿಯ ಅರ್ಹತಾ ಮಾನದಂಡಗಳು: ವೇತನ: 42000/-, ವಿದ್ಯಾರ್ಹತೆ: ಪಿ.ಯು.ಸಿ, ಡಿಪ್ಲೋಮ, ಐ.ಟಿ.ಐ., ವಯಸ್ಸಿನ ಮಿತಿ: ಸಾಮಾನ್ಯ ಅಭ್ಯರ್ಥಿ: 35ವರ್ಷ, ಒಬಿಸಿ: 38ವರ್ಷ, ಎಸ್ ಸಿ/ಎಸ್ ಟಿ: 40ವರ್ಷ, ಅರ್ಜಿ ಸಲ್ಲಿಸಲು ಕೊನೆಯ ದಿನ ಏ.3 ಆಗಿರುತ್ತದೆ.
ಜಿಲ್ಲಾವಾರು ಹುದ್ದೆಗಳ ವಿವರ: ಬೆಂಗಳೂರು ನಗರ 32 , ಬೆಂಗಳೂರು ಗ್ರಾಮಾಂತರ 34 , ಚಿತ್ರದುರ್ಗ 32 , ಕೋಲಾರ 45 , ತುಮಕೂರು 73 , ರಾಮನಗರ 51 , ಚಿಕ್ಕಬಳ್ಳಾಪುರ 42, ಶಿವಮೊಗ್ಗ 31 , ಮೈಸೂರು 66, ಚಾಮರಾಜನಗರ 55, ಮಂಡ್ಯ 60, ಹಾಸನ 54, ಚಿಕ್ಕಮಗಳೂರು 23, ಕೊಡಗು 06, ಉಡುಪಿ 22, ದಕ್ಷಿಣ ಕನ್ನಡ 50 , ಬೆಳಗಾವಿ 64 , ವಿಜಯಪುರ 07 , ಬಾಗಲಕೋಟ 22, ದಾರವಾಡ 12, ಗದಗ 30, ಹಾವೇರಿ 34, ಉತ್ತರ ಕನ್ನಡ 02, ಕೊಪ್ಪಳ 03, ಬಳ್ಳಾರಿ 03, ಬೀದರ್ 05, ಯಾದಗಿರಿ 08, ವಿಜಯನಗರ 03 , ಕಲಬುರಗಿ 67 ಹಾಗೂ ರಾಯಚೂರು 04 ಮತ್ತು ಕೊಪ್ಪಳದಲ್ಲಿ 16 ಹುದ್ದೆಗಳಿವೆ.
ಹೆಚ್ಚಿನ ಮಾಹಿತಿಗಾಗಿ ವಿದ್ಯಾಮಾತಾ ಅಕಾಡೆಮಿ ಪುತ್ತೂರು ಶಾಖೆ: PH: 96204 68869, 9148935808.
ಸುಳ್ಯ ಶಾಖೆ: PH: 9448527606 ಸಂಪರ್ಕಿಸುವಂತೆ ಕೋರಲಾಗಿದೆ.