ಅರಸಿನಮಕ್ಕಿ: ಅರಿಕೆಗುಡ್ಡೆ ವನದುರ್ಗಾ ದೇವಿ ಸನ್ನಿಧಿಯಲ್ಲಿ ಬೆಳಿಗ್ಗೆ 8 ಗಂಟೆಯಿಂದ ಪುಣ್ಯಾಹ, ಗಣಪತಿ ಹೋಮ, ಮೃತ್ಯುಂಜಯ ಹೋಮ, ಶಾಂತಿ ಪ್ರಾಯಶ್ಚಿತ ಹೋಮ, ವನದುರ್ಗ ಹೋಮ, ಹೋಮ ಕಲಶಾಭಿಷೇಕ, ಅಂಕುರ ಪೂಜೆ, ನೆರವೇರಿತು.ಪೂರ್ವಾಹ್ನ ಶಿಬಾಜೆ ಗ್ರಾಮಸ್ಥರಿಂದ ಹೊರೆ ಕಾಣಿಕೆ ಸಮರ್ಪಣೆ ನಡೆಯಿತು.
ಸಂಜೆ ಶ್ರೀಮತ್ಸ್ಯ ಶಿವದುರ್ಗ ಭಜನಾ ಮಂಡಳಿ ಶಿಶಿಲ, ಶ್ರೀ ವೈದ್ಯನಾಥೇಶ್ವರ ಭಜನಾ ಮಂಡಳಿ ಕೊಕ್ಕಡ ಹಾಗೂ ಶ್ರೀ ಭಜನಾಂತರಂಗ ದರ್ಬೆತಡ್ಕ ಇವರಿಂದ ಭಜನಾ ಕಾರ್ಯಕ್ರಮ ನೆರವೇರಿತು.ಸಂಜೆ ದುರ್ಗಾಪೂಜೆ, ಅಂಕುರ ಪೂಜೆ ಮಹಾಪೂಜೆ ನಡೆಯಿತು.
ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಲು ಆಗಮಿಸಿದ ಶ್ರೀ ಸಂಪುಟ ನರಸಿಂಹ ಮಠ ಸುಬ್ರಹ್ಮಣ್ಯದ ಶ್ರೀ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀಪಾದರು ಮಾತನಾಡಿ ನಿಷ್ಕಲ್ಮಶವಾದ ಜಾಗದಲ್ಲಿ ಮಾತ್ರ ದೇವರನ್ನು ಪ್ರತಿಷ್ಠೆ ಮಾಡಲು ಸಾಧ್ಯ.ಅಂತ ಸನ್ನಿಧಾನ ಭಕ್ತಿ ಮತ್ತು ಜನರಿಂದ ತುಂಬಿರುತ್ತದೆ.ಇಂತಹ ಒಂದು ದೇವರ ಕುರುಹು ಇದ್ದದ್ದು ಮನಗಂಡು ಜೀರ್ಣೋದ್ಧಾರ ಕಾರ್ಯ ಮಾಡಿದ್ದು ವಿಶೇಷ ಹಣಕಾಸಿನ ಸಮಸ್ಯೆಯನ್ನು ಎದುರಿಸಿ ಇಷ್ಟೊಂದು ಸುಂದರವಾದ ದೇವಸ್ಥಾನ ನಿರ್ಮಾಣ ಮಾಡಿದ್ದು ದೇವರ ಇಚ್ಛೆಯೆ ಸರಿ ಎಂದರು.
ಶಿಶಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಧೀನ್ ರವರು ಮಾತನಾಡಿ ಅಚ್ಚುಕಟ್ಟಾದ ನಿರ್ವಹಣೆಯನ್ನು ಕೊಂಡಾಡಿದರು.
ಶಿಬಾಜೆ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ರತೀಶ್ ರವರು ಶಿಥಿಲಾವಸ್ಥೆಯಲ್ಲಿ ಇದ್ದ ದೇವಾಲಯ ಇಷ್ಟೊಂದು ಸುಂದರವಾಗಿ ನಿರ್ಮಾಣಗೊಂಡಿರುವ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಪ್ರಕಾಶ್ ಪಿಲಿಕಬೆ ಮತ್ತು ಜಯರಾಮ ನೆಲ್ಲಿತ್ತಾಯರ ಮಾರ್ಗದರ್ಶನದಿಂದ ದಿಂದ ಈ ಸುಂದರ ಕಾರ್ಯ ನಡೆದಿರುವ ಕುರಿತು ಮಾತನಾಡಿದರು.
ಧರ್ಮ ಸಂದೇಶ ನೀಡಲು ಆಗಮಿಸಿದ ಆರೋಗ್ಯ ಕ್ಲಿನಿಕ್ ನಾವೂರಿನ ಡಾಕ್ಟರ್ ಪ್ರದೀಪ ಆಟಿಕುಕ್ಕೆ ಮಾತನಾಡಿ ಗ್ರಾಮದ ಸದ್ಭಕ್ತರು ಮನಸ್ಸು ಮಾಡಿದರೆ ದೇವಸ್ಥಾನವನ್ನು ಯಾವ ರೀತಿಯಲ್ಲಿ ಬೆಳಗಿಸಬಹುದು ಎಂದು ಮನಗಂಡೆ. ಅರಸಿನಮಕ್ಕಿ ವ್ಯಾಪ್ತಿಯಲ್ಲಿ ನಾಲ್ಕರಿಂದ ಐದು ದೇವಿ ದೇವಸ್ಥಾನ ಇದೆ ಎಂದರೆ ದೇವಿಗೆ ಈ ಭಾಗದಲ್ಲಿ ನೆಲೆಸಲು ಇಚ್ಛೆ ಇದ್ದಂತೆ ಕಾಣುತ್ತದೆ ಎಂದರು.
ಬೆಳ್ತಂಗಡಿ ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀನಿವಾಸರಾವ್ ಮಾತನಾಡಿ ತಾಯಂದಿರ ತ್ಯಾಗ ಕೊಡುಗೆ ಎಲ್ಲಿಯವರೆಗೆ ಸಮಾಜದ ಮೇಲೆ ಇರುತ್ತದೆ ಅಲ್ಲಿಯವರೆಗೆ ನಮ್ಮ ಸಮಾಜವನ್ನು ತುಳಿಯಲು ಸಾಧ್ಯವಿಲ್ಲ ದೇವಿಯನ್ನು ಆರಾಧಿಸುವ ಜಾಗದಲ್ಲಿ ಶಾಂತಿ ನೆಮ್ಮದಿ ಸಿಗುತ್ತದೆ ಎಂದರು.
ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ವಾಮನ ತಾಮನ್ಕರ್ ಮಾತನಾಡಿ ಸಮಾಜವನ್ನು ಸರಿದಾರಿಗೆ ಕರೆದುಕೊಂಡು ಹೋಗಲು ನಮ್ಮ ಅರಿಕೆಗುಡ್ಡೆಯ ವನದುರ್ಗ ದೇವಸ್ಥಾನ ಮುನ್ನುಡಿ ಬರೆಯಲಿ. ದೇವಿಯ ಆಶೀರ್ವಾದದಿಂದ ನಾವು ಯಾರು ಬೇಧ-ಭಾವ ಮಾಡದೆ ಒಗ್ಗಟ್ಟಾಗಿ ಕೆಲಸ ಮಾಡಿದ್ದೇವೆ ದೇವಸ್ಥಾನ ಕಟ್ಟುವುದು ದೊಡ್ಡ ಕೆಲಸ ಆ ಕೆಲಸವನ್ನು ಪ್ರಕಾಶ್ ಪಿಲಿಕ್ಕಬೆ ಅವರು ಮಾಡಿದ್ದಾರೆ ಎಂದರು.
ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಪ್ರಕಾಶ್ ಪಿಲಿಕ್ಕಬೆ ಮಾತನಾಡಿ ಈ ಮುಂದಿನ ದಿನಗಳಲ್ಲಿ ಧರ್ಮ ಶಿಕ್ಷಣ ನೀಡಲಾಗುವುದು ಎಲ್ಲರೂ ಸಹಕರಿಸಬೇಕಾಗಿ ವಿನಂತಿಸಿದರು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ಅರಸಿನಮಕ್ಕಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗಾಯತ್ರಿಯವರು ಶುಭಕೋರಿದರು.
ವೇದಿಕೆಯಲ್ಲಿ ಶಿಬಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರತ್ನ, ಉಕ್ಕಡ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬೇಬಿ, ಶಿಶಿಲ ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷ ಸಂದೀಪ್ ಅಮ್ಮುಡಂಗೆ, ಅರಿಕೆಗುಡ್ಡ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಪದ್ಮಯ ಬಾರಿಗ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಶ್ರೀರಂಗ ದಾಮ್ಲೆ, ಜಯರಾಮ ನೆಲ್ಲಿತ್ತಾಯ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾಘವೇಂದ್ರ ಕಿಗ್ಗ ಮತ್ತು ಬಳಗ ಶೃಂಗೇರಿ ಇವರಿಂದ ಭಕ್ತಿ ಸಂಗೀತ ಹಾಗೂ ರೂಪಕಲಾ (ಕುಳ್ಳಪ್ಪು) ಕುಂದಾಪುರ ಅಂತಾರಾಷ್ಟ್ರೀಯ ಖ್ಯಾತಿಯ ಮೂರು ಮುತ್ತು ಕಲಾವಿದರಿಂದ, ಕರಾವಳಿ ಮುತ್ತು ಕೆ.ಸತೀಶ್ ಪೈ ರವರ ರಚನೆ ಮತ್ತು ನಿರ್ದೇಶನದ ಹಾಸ್ಯಮಯ ನಾಟಕ ಮೂರು ಮುತ್ತು ನಡೆಯಿತು.
ಸ್ವಾಗತವನ್ನು ಶ್ರೀರಂಗ ದಾಮ್ಲೆ, ಕಾರ್ಯಕ್ರಮ ನಿರೂಪಣೆಯನ್ನು ರೇಣುಕಾ ಸುಧೀರ್, ಗಣೇಶ್ ಕೆ ಹೊಸ್ತೋಟ ಧನ್ಯವಾದವಿತ್ತರು.