


ಧರ್ಮಸ್ಥಳ: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೇ ದಿನ ಮೂರು ಬೈಕ್ ಕಳ್ಳತನ ಮಾಡಲಾಗಿದೆ.
ಫೆ.14 ರಂದು ಬುಧವಾರ ರಾತ್ರಿ ಮೂರು ಬೈಕ್‌ಗಳನ್ನು ಕಳವು ಮಾಡಲಾಗಿದ್ದು, ಇದರಲ್ಲಿ ಧರ್ಮಸ್ಥಳ ದೇಗುಲಕ್ಕೆ ಯಾತ್ರಾರ್ಥಿಯಾಗಿ ಬಂದ ಕೊಪ್ಪಳದ ವ್ಯಕ್ತಿಯೊಬ್ಬರ ಬೈಕ್ ಸಹ ಸೇರಿದೆ.ಇದು ಪ್ರಸಿದ್ಧ ಕ್ಷೇತ್ರ ಧರ್ಮಸ್ಥಳಕ್ಕೆ ಬರುವ ಭಕ್ತರಲ್ಲಿ ಸಹ ಆತಂಕಕ್ಕೆ ಕಾರಣವಾಗಿದೆ.


ಮೊದಲ ಘಟನೆಯಲ್ಲಿ ಧರ್ಮಸ್ಥಳ ಗ್ರಾಮದ ನಿವಾಸಿ ಬೇಬಿ ಎಂಬವರ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ.ಬೇಬಿ ಅವರು ಬೆಳಗ್ಗೆ ಎದ್ದು ನೋಡಿದಾಗ ಬೈಕ್ ನಿಲ್ಲಿಸಿದ್ದ ಸ್ಥಳದಿಂದ ಬೈಕ್ ಕಾಣೆಯಾಗಿತ್ತು.
ಎರಡನೇ ಘಟನೆಯಲ್ಲಿ, ಸುಳ್ಯದ ನಿವಾಸಿ ಅಖಿಲೇಶ್ ಎಂಬುವರು ಬೈಕ್ ಕಳೆದುಕೊಂಡಿದ್ದಾರೆ. ಧರ್ಮಸ್ಥಳದ ಗಡಿಭಾಗದ ಕಲ್ಮಂಜ ಗ್ರಾಮದ ಮದ್ಮಾಳ್ ಕಟ್ಟೆಯಲ್ಲಿರುವ ಸಂಬಂಧಿಕರ ಮನೆಗೆ ಆಗಮಿಸಿದ್ದರು.ಸಂಬಂಧಿಕರ ಮನೆ ಬಳಿ ಬೈಕ್ ನಿಲ್ಲಿಸಿದ್ದರು. ಆದರೆ, ಬೆಳಗ್ಗೆ ಪರಿಶೀಲಿಸಿದಾಗ ಕಾಣೆಯಾಗಿದೆ.ಬೈಕಿನ ಮೌಲ್ಯ 65,000 ರೂಪಾಯಿ ಎಂದು ಅಂದಾಜಿಸಲಾಗಿದೆ.








