ಕೊಕ್ಕಡ: ಕರ್ನಾಟಕ ರಾಜ್ಯ ಸರಕಾರ ಜಿಲ್ಲಾ ಆಡಳಿತ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಬೆಳ್ತಂಗಡಿ ಸಮಾಜ ಕಲ್ಯಾಣ ಇಲಾಖೆ ಮತ್ತು ಗ್ರಾಮ ಪಂಚಾಯತ್ ಪಟ್ರಮೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಫೆ.17 ರಂದು ಪಟ್ರಮೆ ಗ್ರಾಮ ಪಂಚಾಯತ್ ನಲ್ಲಿ ಸಂವಿಧಾನ ದಿನಾಚರಣೆಯ ಪ್ರಯುಕ್ತ ಗ್ರಾಮಕ್ಕೆ ಆಗಮಿಸಿದ ರಥವನ್ನು ಪಟ್ರಮೆ ವಿಷ್ಣುಮೂರ್ತಿ ದೇವಸ್ಥಾನದ ಬಳಿ ಸ್ವಾಗತಿಸಿದರು.
ಗ್ರಾಮದ ಶಾಲಾ ಮಕ್ಕಳು ಮತ್ತು ಗ್ರಾಮಸ್ಥರು ಬ್ಯಾಂಡ್ ವಾದ್ಯಗಳೊಂದಿಗೆ ಗ್ರಾಮ ಪಂಚಾಯತ್ ಕಛೇರಿವರೆಗೆ ಜಾಥ ಮೂಲಕ ಕರೆತರಲಾಯಿತು.ಸಂವಿಧಾನ ಜಾಥಾ ರಥದ ಮಹತ್ವವನ್ನು ಸೇರಿದ ವೀಕ್ಷಕರಿಗೆ ವಿವರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವಸದಸ್ಯರು, ಸಮಾಜ ಕಲ್ಯಾಣ ಇಲಾಖಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾಧಿಕಾರಿಗಳು ಶಾಲಾ ಶಿಕ್ಷಕ ವೃಂದ, ಶಾಲಾ ಮಕ್ಕಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖಾಧಿಕಾರಿಗಳು, ಮಹಿಳಾ ಸಂಜೀವಿನಿ ಒಕ್ಕೂಟದ ಸದಸ್ಯರು, ಪಂಚಾಯತ್ ಸಿಬ್ಬಂದಿ ವರ್ಗ, ಬೆಳ್ತಂಗಡಿ ತಾಲೂಕು ಪಂಚಾಯತ್ ನ ವಿನಿಷಾ ರವರು ಭಾಗವಹಿಸಿದ್ದರು.
ಪಟ್ರಮೆ ಪಂಚಾಯತ್ ಅಧ್ಯಕ್ಷ ಮನೋಜ್ ಅಂಗಾರಗುಡ್ಡೆ ಸ್ವಾಗತಿಸಿ, ಸಂವಿಧಾನ ಜಾಗೃತಿಯ ಬಗ್ಗೆ ಹಾಗೂ ಸಂವಿಧಾನದ ಆಶಯಗಳ ಬಗ್ಗೆ ಪಟ್ಟೂರು ಶ್ರೀರಾಮ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕ ಚಂದ್ರಶೇಖರ ಶೇಟ್ ಮಾಹಿತಿ ನೀಡಿದರು.ಸೂರ್ಯತ್ತಾವು ಸ.ಕಿ.ಪ್ರಾ. ಶಾಲಾ ಮುಖ್ಯ ಶಿಕ್ಷಕ ಪ್ರಸಾದ್ ಸಂವಿಧಾನ ಪ್ರತಿಜ್ಞಾ ವಿಧಿ ಬೋದಿಸಿದರು.
ಸಂವಿಧಾನದ ಕುರಿತು ಪ್ರಬಂಧ ಸ್ಪರ್ಧೆಯ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಪಂಚಾಯತ್ ಕಾರ್ಯದರ್ಶಿ ಅಮ್ಮಿ ಬಿ.ಪಿ. ರವರು ಕಾರ್ಯಕ್ರಮ ನಿರೂಪಿಸಿ, ಪಂಚಾಯತ್ ಸಿಬ್ಬಂದಿ ಲೋಕೇಶ್ ಧನ್ಯವಾದಗಳನ್ನು ಸಲ್ಲಿಸಿದರು.