ಉರುವಾಲು: ಪಂಚಲಿಂಗೇಶ್ವರ ಎಂದರೆ ಪಂಚ ತತ್ವಗಳನ್ನು ಆಧರಿಸಿರುತ್ತದೆ. ಹೆತ್ತ ತಂದೆ ತಾಯಿಯರನ್ನು ವೃದ್ಧಾಶ್ರಮದಲ್ಲಿ ಬಿಡುವುದು ನಮ್ಮ ದೇಶದ ಸಂಸ್ಕೃತಿ ಅಲ್ಲ, ನದಿ ಹೇಗೆ ಮುಂದೆ ಹರಿಯುತ್ತದೆ ಹಾಗೇಯೇ ನಮ್ಮ ಬದುಕು ಮುಂದೆ ಸಾಗಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ನಾ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಜಿ ಆಶೀರ್ವಚನ ನೀಡಿದರು.
ಕೊರಿಂಜ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಅಂಗವಾಗಿ ಫೆ.16ರಂದು ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಕಣಿಯೂರು ಗ್ರಾ.ಪಂ. ಅಧ್ಯಕ್ಷ ಯಶವಂತ್ ಅಧ್ಯಕ್ಷತೆ ವಹಿಸಿದ್ದರು.ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಹ ಸೇವಾ ಪ್ರಮುಖ್ ನಾ. ಸೀತಾರಾಮ ಧಾರ್ಮಿಕ ಉಪನ್ಯಾಸ ನೀಡಿದರು.
ಶ್ರೀ ಮಂಜುನಾಥ ಸ್ವಾಮಿ ವೇದಿಕೆಯನ್ನು ನಾಳ ದುರ್ಗಾ ಶಾಸಕ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹರೀಶ್ ಪೂಂಜ ಉದ್ಘಾಟಿಸಿ ತುರ್ತು ಕಾರ್ಯದ ನಿಮಿತ್ತ ನಿರ್ಗಮಿಸಿದರು.ಬೆಂಗಳೂರಿನ ಉದ್ಯಮಿ ನಟೇಶ್ ಪೂಜಾರಿ ಸಭಾ ಭವನವನ್ನು ಉದ್ಘಾಟಿಸಿದರು.
ಹಸಿರು ಹೊರೆಕಾಣಿಕೆ: ಕ್ಷೇತ್ರಕ್ಕೆ ಅಭೂತಪೂರ್ವ ಮೆರವಣಿಗೆಯ ಮೂಲಕ ಹಸಿರು ಹೊರೆ ಕಾಣಿಕೆ ಸಮರ್ಪಣೆ ಮಾಡಲಾಯಿತು. ಸುಮಾರು 350ಕಿಂಟ್ವಾಲ್ ಅಕ್ಕಿ ಸಂಗ್ರಹವಾಗಿದೆ. ಅಡಿಕೆ,ಹಿಂಗಾರ, ತೆಂಗಿನಕಾಯಿ ಸಹಿತ ತರಕಾರಿಗಳನ್ನು ಕ್ಷೇತ್ರಕ್ಕೆ ಭಕ್ತರು ಸರ್ಮಪಿಸಿದರು.
ಶ್ರೀ ಕ್ಷೇತ್ರ ಸುಬ್ರಹ್ಮಣ್ಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮೋಹನ್ ರಾವ್ ಸುಳ್ಳಿ, ಮಲ್ಲೆಂಗಲ್ಲು ಉಮಾಮಹೇಶ್ವರ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಸದಾನಂದ ಮೇಲಾಂಟ ಮುಗರೋಡಿ, ಸಿವಿಲ್ ಇಂಜಿನಿಯರ್ ತಣ್ಣೀರುಪಂತ ಗ್ರಾ.ಪಂ.ಸದಸ್ಯ ಸಾಮ್ರಾಟ್ ಕರ್ಕೇರ, ಮಾನ್ಯ ಸತ್ಯಚಾವಾಡಿ ಮನೆ ಅಧ್ಯಕ್ಷ ಜನಾರ್ದನ ಪೂಜಾರಿ ಕಡ್ತಿಲ, ಬಾರ್ಯ ಫ್ಯಾಕ್ಸ್ ಅಧ್ಯಕ್ಷ ಪ್ರವೀಣ್ ರೈ, ಬಂದಾರು ಗ್ರಾ.ಪಂ. ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಜನಜಾಗೃತಿ ವೇದಿಕೆ ಕೇಂದ್ರ ಸಮಿತಿಯ ಕಾರ್ಯಕಾರಿ ಸದಸ್ಯ ಮೋನಪ್ಪ ಗೌಡ ಮಣಿಲ, ಕುರಾಯ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಗೌಡ ಮಡ್ಯಲಕಂಡ, ಪೆಲತ್ತಿಮಾರು ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷ ಸುಂದರ ಗೌಡ ನಿನ್ನಿಕಲ್ಲು, ಸಹಸ್ರಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿಯ ಮಾಜಿ ಸದಸ್ಯ ಕರುಣಾಕರ ಸುವರ್ಣ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಾಸಪ್ಪ ಗೌಡ ಕೋಡಿಯಡ್ಕ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಪ್ರಸನ್ನ ದರ್ಬೆ, ಪ್ರಧಾನ ಕಾರ್ಯದರ್ಶಿ ಪ್ರಸಾದ್ ಪೂಜಾರಿ ಕಡ್ತಿಲ, ಮೊಕ್ತೇಸರ ಲಿಂಗಪ್ಪ ನಾಯ್ಕ ಹಾಗೂ ಸೇಸಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆಡಳಿತ ಮೊಕ್ತೇಸರ ಯೋಗೀಶ್ ಪೂಜಾರಿ ಕಡ್ತಿಲ ಸ್ವಾಗತಿಸಿದರು.ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ ಕಲ್ಲಳಿಕೆ ವಂದಿಸಿದರು.ಉಪನ್ಯಾಸಕ ಮಹಾಗಣಪತಿ ಭಟ್ ಕಾರ್ಯಕ್ರಮ ನಿರೂಪಿಸಿದರು.