ಬೆಳಾಲಿನಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ, ವಿಶೇಷ ಗ್ರಾಮ ಸಭೆ

0

ಬೆಳಾಲು: ವಿಶ್ವವಿಕಲಚೇತನರ ದಿನಾಚರಣೆ ಬೆಳಾಲು ಗ್ರಾಮ ಪಂಚಾಯತ್ ನಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಹಾಗೂ ವಿಕಲಚೇತನರ ಸಮನ್ವಯ ಗ್ರಾಮ ಸಭೆ ಪಂಚಾಯತ್ ಸಭಾಂಗಣದಲ್ಲಿ ಫೆ.16ರಂದು ಬಹಳ ಅರ್ಥ ಪೂರ್ಣವಾಗಿ ನೆರವೇರಿತು.

ಕಾರ್ಯಕ್ರಮದ ಅಧ್ಯಕ್ಷತೆ ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ ವಹಿಸಿದ್ದರು.

ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷೆ ಗೀತಾ, ಸದಸ್ಯರುಗಳಾದ ಸತೀಶ್ ಎಳ್ಳುಗದ್ದೆ, ಸುರೇಂದ್ರ ಗೌಡ ಸುರುಳಿ, ಕೃಷ್ಣಯ್ಯ ಆಚಾರ್ಯ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಕ್ಹ್ಮೀ ಬಾಯಿ ಹೆಚ್. ಉಪಸ್ಥಿತರಿದ್ದರು.

ಬೆಳ್ತಂಗಡಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಬಿ.ಕೆ.ಕಾರ್ಯಕ್ರಮವನ್ನು ಉದ್ಘಾಟಿಸಿ ಕಾನೂನು ಅರಿವು ಬಗ್ಗೆ ಮಾಹಿತಿ ನೀಡಿದರು.ವಿಶೇಷ ಆಹ್ವಾನಿತರಾಗಿ ಬೆಳ್ತಂಗಡಿ ವಿಕಲಚೇತನರ ನೋಡೆಲ್ ಅಧಿಕಾರಿ ರತ್ನಾವತಿ, ಬೆಳ್ತಂಗಡಿ ಸಂಜೀವಿನಿ ಒಕ್ಕೂಟದ ವಲಯ ಮೇಲ್ವಿಚಾರಕ ಜಯಾನಂದ, ವಿಕಲಚೇತನರ ತಾಲೂಕು ಸಂಯೋಜಕ ಜಾನ್ ಬ್ಯಾಪ್ತಿಷ್ಟ ಡಿಸೋಜ, ಬೆಳಾಲು ಗ್ರಾಮದ ಮಾಯಾ ಶಾಲಾ ಮುಖ್ಯ ಶಿಕ್ಷಕ ವಿಠ್ಠಲ ಎಂ., ಬೆಳಾಲು ಪ್ರೌಢ ಶಾಲಾ ಶಿಕ್ಷಕ ರಾಮಕೃಷ್ಣ ಚೊಕ್ಕಾಡಿ, ಕೊಲ್ಪಾಡಿ ಕಿ.ಪ್ರಾ.ಶಾಲಾ ಶಿಕ್ಷಕ ಸುರೇಶ್ ಎಂ., ಪೆರಿಯಡ್ಕ ಶಾಲಾ ಮುಖ್ಯೋಪಾಧ್ಯಾಯಿನಿ ವಿಜಯ, ಧರ್ಮಸ್ಥಳ ಪೊಲೀಸ್ ಠಾಣೆಯ ಬೆಳಾಲು ಗಸ್ತು ಪೊಲೀಸ್ ಅಧಿಕಾರಿಗಳಾದ ನಾಗರಾಜ ಹಾಗೂ ಹುಲಿರಾಜ, ಆರೋಗ್ಯ ಇಲಾಖೆಯ ಜ್ಯೋತಿ ಮತ್ತು ಕು.ತೇಜು ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಕಾರ್ಯಕ್ರಮದ ಅನೇಕ ಯೋಜನೆಗೆ ಧನಸಹಾಯ ನೀಡಿದ ದಾನಿಗಳು ಹಾಗೂ ಧರ್ಮಸ್ಥಳ ಕ.ರಾ.ರ ಸಾರಿಗೆ ನಿಗಮ ಧರ್ಮಸ್ಥಳ ಘಟಕದ ಚಾಲಕ- ನಿರ್ವಾಹಕರಾದ ಬೆಳಾಲು ಗ್ರಾಮದ ಯತೀಶ್, ಶ್ರೀನಿವಾಸ ಗೌಡ ಹಾಗೂ ಲೋಕೇಶ್, ಮೂಡಿಗೆರೆ ಘಟಕದ ರಾಘವೇಂದ್ರ, ವಸಂತ, ಸಂತೋಷ, ಇಂದಬೆಟ್ಟು, ಉಜಿರೆ ಗ್ರಾಮ ಕಣಿಯೂರು ಗ್ರಾಮ ಧರ್ಮಸ್ಥಳ ಗ್ರಾಮ ಪಂಚಾಯತ್ ನ ವಿಕಲಚೇತನ ಗ್ರಾಮೀಣ ಪುನರ್ವಸತಿ ಸಂಯೋಜಕರುಗಳು ಹಾಗೂ ಗ್ರಾಮದ ಹಿರಿಯ ನಾಗರಿಕರರು ವಿಕಲಚೇತನರ ಹಾಗೂ ಪಾಲಕರು ಪೋಷಕರು ಬಾಗಿಯಾಗಿದ್ದರು.

ಕಾರ್ಯಕ್ರಮದಲ್ಲಿ ಸುಮಾರು 60 ಜನ ವಿಕಲಚೇತನರಿಗೆ ತಲಾ 5 ಕೆಜಿ ಅಕ್ಕಿ ಕಿಟ್ ಹಾಗೂ 10 ಜನ ವಿಕಲಚೇತನ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಹಾಗೂ ನೀರಿನ ಬಾಟಲ್ ವಿತರಣೆ ಮಾಡಲಾಯಿತು.

ವಿಕಲಚೇತನರ ಸರ್ಕಾರಿ ಯೋಜನೆ ಕಾನೂನು ಮಾಹಿತಿ ನೀಡಲಾಯಿತು.ಸಾರಿಗೆ ನೌಕರರು ಹಾಗೂ ಹಿರಿಯ ನಾಗರಿಕರು, ಮುಖ್ಯ ಶಿಕ್ಷಕರುಗಳನ್ನು ಗೌರವಿಸಲಾಯಿತು.ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ತಲಾ 2,000 ರೂ ನೀಡಲಾಯಿತು.ಕಾರ್ಯಕ್ರಮದಲ್ಲಿ ಪಂಚಾಯತ್ ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು.ವಿಕಲಚೇತನರ ಗ್ರಾಮೀಣ ಪುನರ್ವಸತಿ ಸಂಯೋಜಕ ಈರಣ್ಣ ಎಸ್ ಹೆಚ್.ಬೆಳಾಲು ಪ್ರಾಸ್ತಾವಿಕ ಮಾತನಾಡಿ ಧನ್ಯವಾದವಿತ್ತರು.ಪ್ರಮೀಳ ಸುರೇಶ್ ಇಂರ್ಬಿತ್ತಿಲ್ ನಿರೂಪಿಸಿದರು.

LEAVE A REPLY

Please enter your comment!
Please enter your name here