ಉಜಿರೆ: ಉತ್ತಮ ಶಿಕ್ಷಕನಾಗಿ ಗುರುತಿಸಲ್ಪಡಲು ಅಗತ್ಯವಿರುವ ಗುಣಗಳು, ವಿದ್ಯಾರ್ಥಿ ಮತ್ತು ಪೋಷಕರೊಂದಿಗೆ ನಿರ್ವಹಿಸಬೇಕಾದ ಜವಾಬ್ದಾರಿಗಳನ್ನು ತಿಳಿಸುತ್ತಾ N.I.T.K ಸುರತ್ಕಲ್‌ನ ವಿಶ್ರಾಂತ ನಿರ್ದೇಶಕರು ಹಾಗೂ ವಿ.ಕುಲಸಚಿವರಾಗಿದ್ದ ಡಾ.ಸುಧಾಕರ್ ನಾಯಕ್‌ರವರು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಫೆ.10ರಂದು ಆಯೋಜಿಸಲಾಗಿದ್ದ ಶಿಕ್ಷಕರ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಜಾತಿ-ಧರ್ಮ, ಲಿಂಗ, ಬಡವ-ಬಲ್ಲಿದನೆಂಬ ತಾರತಮ್ಯವನ್ನು ಮೀರಿ, ನ್ಯಾಯೋಚಿತವಾಗಿದ್ದು ವಿದ್ಯಾರ್ಥಿಗಳೊಡನೆ ಶಿಕ್ಷಕರು ಸಹನೆಯಲ್ಲಿ ವರ್ತಿಸುತ್ತಾ ವೈಯಕ್ತಿಕ ಜೀವನದಲ್ಲಿ ಚಾರಿತ್ರವಂತರಾಗಿರಬೇಕೆಂದರು.
ತರಗತಿಯಲ್ಲಿ ವಿನೂತನ ಕಲಿಕಾ-ಬೋಧನಾ ವಿಧಾನಗಳನ್ನು ಸಂದರ್ಭಕ್ಕನುಗುಣವಾಗಿ ಅಳವಡಿಸಿಕೊಳ್ಳುತ್ತಾ ತಾವು ಬೋಧಿಸುವ ವಿಷಯಗಳಲ್ಲಿ ಆಳವಾದ ಜ್ಞಾನ ಹಾಗೂ ಹಿಡಿತವನ್ನು ಹೊಂದಿರಬೇಕೆಂದು ವಿವಿಧ ಸಾಂಧರ್ಭಿಕ ಉದಾಹರಣೆಯೊಂದಿಗೆ ವಿವರಿಸಿದರು.
ಪ್ರಾಂಶುಪಾಲ ಡಾ.ಅಶೋಕ್‌ಕುಮಾರ್ ಸ್ವಾಗತಿಸಿದರು.ಡಾ.ಗಿರೀಶ್‌ಕುಮಾರ್‌ಅತಿಥಿ ಪರಿಚಯ ಮಾಡಿದರು, ಡಾ. ಸಂದೀಪ್ ವಂದಿಸಿದರು.