ಇಂದಬೆಟ್ಟು: ಸಂವಿಧಾನ ಜಾಗೃತಿ ಜಾಥಾ

0

ಇಂದಬೆಟ್ಟು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಬೆಳ್ತಂಗಡಿ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗ್ರಾಮ ಪಂಚಾಯತ್ ಇಂದಬೆಟ್ಟು ಇವರ ಜಂಟಿ ಆಶ್ರಯದಲ್ಲಿ ಫೆ.14ರಂದು ಗ್ರಾಮ ಪಂಚಾಯತ್ ಇಂದಬೆಟ್ಟು ಪ್ರಯಾಣಿಕರ ಬಸ್ಸು ತಂಗುದಾಣದಿಂದ ಇಂದಬೆಟ್ಟು ಗ್ರಾಮ ಪಂಚಾಯತ್ ಸಭಾಂಗಣದವರೆಗೆ ಶಾಲಾ ಮಕ್ಕಳ ಕಾಲ್ನಡಿಗೆ, ಬೈಕ್, ರಿಕ್ಷಾ ವಾಹನಗಳ ಮೆರವಣಿಗೆಯ ಜಾಥಾ ಮೂಲಕ ಬರಮಾಡಿಕೊಳ್ಳಲಾಯಿತು.

ಸಂವಿಧಾನ ಜಾಗೃತಿ ಜಾಥಾವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಪಂಚಾಯತ್ ಕಾರ್ಯದರ್ಶಿ, ಸಿಬ್ಬಂದಿವರ್ಗ, ನರೇಗಾ ತಾಲೂಕು ಐಇಸಿ ಸಂಯೋಜಕರು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಎಮ್ ಬಿ ಕೆ, ಎಲ್ ಸಿ ಆರ್ ಪಿ, ಸ್ವಸಹಾಯ ಸಂಘದ ಸದಸ್ಯರು, ಸಮುದಾಯ ಆರೋಗ್ಯ ಅಧಿಕಾರಿ, ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಭವ್ಯ ಮೆರವಣಿಗೆಯೊಂದಿಗೆ ಸ್ವಾಗತಿಸಲಾಯಿತು.

ಕಾರ್ಯಕ್ರಮವನ್ನು ನಾಡಗೀತೆಯೊಂದಿಗೆ ಪ್ರಾರಂಭಿಸಲಾಯಿತು.ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾಲತಾ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಇವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವಿಸಿದರು ಮತ್ತು ಸಂವಿಧಾನದ ಬಗ್ಗೆ ಪ್ರಾಸ್ತಾವಿಕ ನುಡಿ ಮಾತನಾಡಿದರು.

ಪೀಠಿಕೆಯನ್ನು ಪಂಚಾಯತ್ ಕಾರ್ಯದರ್ಶಿ ಗಿರಿಯಪ್ಪ ಗೌಡ ಇವರು ಭೋಧನೆ ಮಾಡಿದರು.ಸಂವಿಧಾನ ಕಾರ್ಯಕ್ರಮದ ಸ್ಪರ್ದೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಪಂಚಾಯತ್ ವತಿಯಿಂದ ಬಹುಮಾನ ನೀಡಲಾಯಿತು. ಮಂಗಳೂರಿನ ಕಲಾ ತಂಡದಿಂದ ಸಂವಿಧಾನ ಜಾಗೃತಿ ಕುರಿತು ಗೀತಾ ಗಾಯನ ಹಾಗೂ ಪ್ರಹಸನ ಪ್ರದರ್ಶಿಸಿದರು.ಕಾರ್ಯಕ್ರಮವನ್ನು ಪಂಚಾಯತ್ ಕಾರ್ಯದರ್ಶಿಯವರು ನಿರೂಪಿಸಿ ಸ್ವಾಗತಿಸಿದರು.ಕಿಶೋರ್ ಎಂ ಮುಖ್ಯೋಪಾದ್ಯಾಯರು ಸ.ಹಿ.ಪ್ರಾ ಶಾಲೆ ದೇವನಾರಿ ರವರು ಧನ್ಯವಾದ ನೀಡಿದರು.

ಕಾರ್ಯಕ್ರಮದ ಯಶಸ್ವಿಗೆ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಸಹಕರಿಸಿದರು.

LEAVE A REPLY

Please enter your comment!
Please enter your name here