ಕುಕ್ಕೇಡಿ ಬುಳೆಕ್ಕಾರ ಶಾಲೆಯಲ್ಲಿ ಪುಂಜಾಲಕಟ್ಟೆ ಸರಕಾರಿ ಕಾಲೇಜು ಎನ್.ಎಸ್.ಎಸ್ ಶಿಬಿರದ ಉದ್ಘಾಟನೆ

0

ಕುಕ್ಕೇಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ, ರಾಷ್ಟೀಯ ಸೇವಾ ಯೋಜನೆ ಘಟಕ ಒಂದು ಮತ್ತು ಎರಡರ ವತಿಯಿಂದ ಕುಕ್ಕೇಡಿ ಬುಳೆಕ್ಕಾರ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2023-24 ರ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ ಫೆ.9 ರಂದು ನಡೆಯಿತು.ಫೆ.15 ರ ರವೆಗೆ ಶಿಬಿರ ಹಮ್ಮಿಕೊಳ್ಳಲಾಗಿದೆ.

ಕುಕ್ಕೇಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ.ಕೆ ಉದ್ಘಾಟಿಸಿ ಶುಭ ಹಾರೈಸಿದರು.ಅಧ್ಯಕ್ಷಯನ್ನು ಕಾಲೇಜು ಪ್ರಾಂಶುಪಾಲ ಪ್ರೊ.ಮಾಧವ ಎಂ ವಹಿಸಿಕೊಂಡಿದ್ದರು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಗೋಪಾಲ ಶೆಟ್ಟಿ, ಕುಕ್ಕೇಡಿ ದ.ಕ.ಜಿ.ಪಂ.ಹಿ.ಪ್ರಾ.ಶಾಲಾ ಮುಖ್ಯ ಶಿಕ್ಷಕ ಸತೀಶ್, ರಾ.ಸೇ.ಯೋ.ಯ ಯೋಜನಾಧಿಕಾರಿ ಕಿಶೋರ್ ಜೈನ್, ಪದಾಧಿಕಾರಿಗಳು ಮತ್ತು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

ಈ ಕಾರ್ಯಕ್ರಮವನ್ನು ರೆಡ್ ರಿಬ್ಬನ್ ನ ಪದಾಧಿಕಾರಿಯಾದ ಕು.ರೂಪ ಸ್ವಾಗತಿಸಿ, ಕು.ರೇಖಾ ಧನ್ಯವಾದವಿತ್ತರು, ಪದಾಧಿಕಾರಿಯಾದ ಕು. ದೀನಕೃಪಾ ನಿರೂಪಿಸಿದರು.

LEAVE A REPLY

Please enter your comment!
Please enter your name here