ಮಂಜೊಟ್ಟಿ ಹೋಲಿಕ್ರಾಸ್ ಚರ್ಚ್ ನಲ್ಲಿ ಪವಿತ್ರ ಶಿಲುಬೆಯ ಅವಶೇಷದ ಭವ್ಯ ಮೆರವಣಿಗೆ, ಅನಾವರಣ ಸಂಭ್ರಮ

0

ಬೆಳ್ತಂಗಡಿ: ಮಂಜೊಟ್ಟಿಯ ಹೋಲಿಕ್ರಾಸ್ ಚರ್ಚ್‌ನ ಆರಾಧ್ಯ ಪವಿತ್ರ ಶಿಲುಬೆಯ ಪುಣ್ಯ ಅವಶೇಷದ ಭವ್ಯ ಮೆರವಣಿಗೆ ಹಾಗೂ ಅನಾವರಣ ಸಂಭ್ರಮ ಇದೇ ಫೆಬ್ರವರಿ ತಿಂಗಳ ಭಾನುವಾರ 18, 2024 ರಂದು ಶ್ರದ್ದಾಭಕ್ತಿಯಿಂದ ಜರುಗಲಿದೆ.ಈ ಪವಿತ್ರ ಶಿಲುಬೆಯ ಪುಣ್ಯ ಅವಶೇಷವು ನಮ್ಮ ಚರ್ಚ್‌ನ ಸದಸ್ಯ ವಿನ್ಸೆಂಟ್ ಪಿರೇರಾ ಮುಖಾಂತರ ಇಟಲಿ ದೇಶದಲ್ಲಿ ಕಾಪುಚಿನ್ ಪ್ರೊವಿನ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ವಂದನೀಯ ಜೊಸ್ಸಿ ಫೆರ್ನಾಂಡೀಸ್ ಇವರ ಮೂಲಕ ಮಂಜೊಟ್ಟಿ ಚರ್ಚ್‌ಗೆ ದೊರಕಿದೆ.ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ| ಪೀಟರ್ ಪಾವ್ ಸಲ್ದಾನಾ ಅವರು ಈ ಅವಶೇಷವನ್ನು ಪ್ರತಿಷ್ಠಾಪಿಸಲು ಪರವಾನಿಗೆ ನೀಡಿದ್ದಾರೆ.

ಪವಿತ ಶಿಲುಬೆಯ ಅವಶೇಷದ ಮೆರವಣಿಗೆ: ಇದೇ ಫೆಬ್ರವರಿ 18ರ ಭಾನುವಾರದಂದು ಪವಿತ್ರ ಶಿಲುಬೆಯ ಅವಶೇಷದ (ವಹನ) ಭವ್ಯ ಮೆರವಣಿಗೆಯು ಸಾಯಂಕಾಲ 4 ಗಂಟೆಗೆ ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್‌ನಿಂದ ಪ್ರಾರಂಭ. ಮಂಜೊಟ್ಟಿ ಹೋಲಿಕ್ರಾಸ್ ಚರ್ಚ್‌ ಬರಲಿದೆ. ತದನಂತರ ಬೆಳ್ತಂಗಡಿ ವಲಯದ ಪ್ರಧಾನ ಧರ್ಮಗುರುಗಳಾದ ಅತೀ ವಂದನೀಯ ವಾಲ್ಟರ್ ಡಿ ಮೆಲ್ಲೋ ಅವರು ದಿವ್ಯ ಬಲಿಪೂಜೆಯೊಂದಿಗೆ ಪುಣ್ಯ ಅವಶೇಷದ ಪ್ರತಿಷ್ಠಾಪನೆಯನ್ನು ನೆರವೇರಿಸಲಿದ್ದಾರೆ.

ಧ್ಯಾನಕೂಟ: ಈ ದಿವ್ಯ ಸಂಭ್ರಮದ ಪೂರ್ವ ತಯಾರಿಯಾಗಿ ಕನ್ನಡ ಭಾಷೆಯಲ್ಲಿ ಮೂರು ದಿನಗಳ ಧ್ಯಾನಕೂಟವನ್ನು ಫೆಬ್ರವರಿ 15ರಿಂದ 17ರ ವರೆಗೆ ಹೋಲಿ ಕ್ರಾಸ್ ಚರ್ಚಿನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ದಿವ್ಯ ಧ್ಯಾನಕೂಟವನ್ನು ಮದ‌ರ್ ಹೋಮ್ ರಿಟ್ರಿಟ್ ಸೆಂಟರ್ ಕಣ್ಣೂರು ಇದರ ಇದರ ಧರ್ಮಗುರುಗಳ ತಂಡ ನೆರವೇರಿಸಲಿದೆ. ಈ ಧ್ಯಾನಕೂಟವು ಸಾಯಂಕಾಲ 4 ಗಂಟೆಯಿಂದ 8ರವರೆಗೆ ನಡೆಯಲಿದ್ದು ಪ್ರತಿದಿನ ಸಾಯಂಕಾಲ ಭಕ್ತಾದಿಗಳಿಗೆ ಊಟದ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ.

ಈ ಎಲ್ಲಾ ಪುಣ್ಯ ಕಾರ್ಯಕ್ರಮಗಳ ನೇರ ಪ್ರಸಾರವನ್ನು Holy Cross Manjotti Yotube Channelನಲ್ಲಿ ನೇರಪ್ರಸಾರ ಮಾಡಲಾಗುವುದು ಎಂದು ಹೋಲಿ ಕ್ರಾಸ್ ಚರ್ಚ್‌ನ ಧರ್ಮಗುರುಗಳಾದ ವಂದನೀಯ ಸ್ವಾಮಿ ಪ್ರವೀಣ್ ಡಿ’ಸೋಜ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

p>

LEAVE A REPLY

Please enter your comment!
Please enter your name here