ನಾರಾವಿ ಗ್ರಾಮ ಸಭೆ

0

ನಾರಾವಿ ಗ್ರಾಮ ಪಂಚಾಯತ್ ನ 2023-24 ನೇ ಸಾಲಿನ ದ್ವೀತಿಯ ಸುತ್ತಿನ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷ ರಾಜವರ್ಮ ಜೈನ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಗ್ರಾಮಸಭೆಯನ್ನು ಕೃಷಿ ಇಲಾಖೆಯ ಸಹಾಯಕ ನಿರ್ದೆಶಕರಾದ ರಂಜಿತ್ ಕುಮಾರ್ ಉತ್ತಮವಾಗಿ ನಡೆಸಿಕೊಟ್ಟರು.

ವೇದಿಕೆಯಲ್ಲಿ ಉಪಾಧ್ಯಕ್ಷೆ ಸುಮಿತ್ರಾ, ಸದಸ್ಯರಾದ ಉದಯ ಹೆಗ್ಡೆ, ಆಶಾಲತಾ, ಮಲ್ಲಿಕಾ, ನಾರಾಯಣ ಪೂಜಾರಿ, ಸಂತೋಷ್ ಮರ್ದೋಟ್ಟು, ಸುದರ್ಶನ ಹೆಗ್ಡೆ, ಯಶೋಧ, ಮೀನಾ, ಡಯಾನ ಪ್ರಮೀಳಾ ರೊಡ್ರಿಗಸ್, ವಸಂತ, ನಾರಾವಿ ಸಿಎ ಬ್ಯಾಂಕ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಶಿಕಾಂತ್ ಜೈನ್ ಉಪಸ್ಥಿತರಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಧಾಕರ ಪೂಜಾರಿ ಸ್ವಾಗತಿಸಿದರು.ಕಾರ್ಯದರ್ಶಿ ಯೋಗೀನಿ ಶೆಟ್ಟಿ ಅನುಪಾಲನಾ ವರದಿ ಸಭೆಯ ಮುಂದಿಟ್ಟರು.

ಜಮಾ ಖರ್ಚಿನ ವಿವರ, ವಾರ್ಡ್ ಸಭೆಯಯಲ್ಲಿ ಬಂದ ಬೇಡಿಕೆಗಳ ಬಗ್ಗೆ ವಿವರ, ಮನೆ ನಿವೇಶನ ಮತ್ತು ವಸತಿ ಯೋಜನೆಗೆ ಬಂದ ಅರ್ಜಿಗಳ ವಿವರ ಪಂಚಾಯತ್ ಸಿಬ್ಬಂದಿ ಸತೀಶ್ ಸಭೆಯ ಮುಂದಿಟ್ಟರು.

ತಾಲೂಕು ಹಾಗೂ ಗ್ರಾಮ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಸವಲತ್ತು ಹಾಗೂ ಮಾಹಿತಿ ನೀಡಿದರು.

ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಗ್ರಾ.ಪಂ ಸಿಬ್ಬಂದಿಗಳು, ಗ್ರಾಮಸ್ಥರು ಸಹಕರಿಸಿದರು.

LEAVE A REPLY

Please enter your comment!
Please enter your name here