ಬಾರ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ 4ನೇ ವರ್ಷದ ಪ್ರತಿಷ್ಠಾ ಮಹೋತ್ಸವ- ಇಂದು(ಫೆ.7) ಮರುಳು ಧೂಮಾವತಿ ದೈವದ ನೇಮೋತ್ಸವ- ಸುದ್ದಿ ಯ್ಯೂಟುಬ್ ಚಾನೆಲ್‌ನಲ್ಲಿ ನೇರಪ್ರಸಾರ

0

ಬಾರ್ಯ: ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ 4ನೇ ವರ್ಷದ ಪ್ರತಿಷ್ಠಾ ಮಹೋತ್ಸವ ಮತ್ತು ಪರಿವಾರ ದೈವಗಳ ನೇಮೋತ್ಸವ ಫೆ.6 ರಿಂದ 9ರವರೆಗೆ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ.

ಫೆ.6ರಂದು ಸಾಮೂಹಿಕ ಪ್ರಾರ್ಥನೆ, ನಡೆದು ಗ್ರಾಮಸ್ಥರು ಹಸಿರು ಹೊರೆಕಾಣಿಕೆಯನ್ನು ನೀಲಗಿರಿ ಮಹಾದ್ವಾರದ ಸಮೀಪದಿಂದ ಮೆರವಣಿಗೆಯ ಮೂಲಕ ಕ್ಷೇತ್ರಕ್ಕೆ ಸಮರ್ಪಸಿದರು.ಬಳಿಕ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂರ್ಪಣೆ ನಡೆಯಿತು.ದೇವರಿಗೆ ರಂಗ ಪೂಜೆ ನೇರವೇರಿ ಪರಾರಿ-ಪುತ್ತಿಲ ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿ ಕಾರ್ಯಕ್ರಮ ಹಾಗೂ ಕಕ್ಯಪದವು ಎಕ್ಸೆಲೆನ್ಸ್ ಡ್ಯಾನ್ಸ್ ಸೆಂಟರ್‌ನಿಂದ ಭರತನಾಟ್ಯ ಜರಗಿ, ಕಲ್ಲಡ್ಕ ವಿಠಲ್ ನಾಯಕ್ ಅವರಿಂದ ಗೀತ ಸಾಹಿತ್ಯ ಸಂಭ್ರಮ ನಡೆಯಿತು.

ಮರುಳು ಧೂಮಾವತಿ ದೈವದ ನೇಮೋತ್ಸವ:
ಫೆ.7ರಂದು ದೇವತಾ ಪ್ರಾರ್ಥನೆ ಮಹಾಗಣಪತಿ ಹೋಮ, ಕಲಶ ಪೂಜೆ, ದೇವರಿಗೆ ಕಲಶಾಭಿಷೇಕ, ದೈವಗಳಿಗೆ ತಂಬಿಲ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.ಸ್ಪೂರ್ತಿ, ಪ್ರೀತಿ ಮಧೂರು ಮತ್ತು ಅನನ್ಯ ಭಟ್ ಕೊಯ್ಯೂರು ರವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.ಪಿಲಿಗೂಡು ಶ್ರೀ ರಾಮಾಂಜನೇಯ ಭಜನಾ ಮಂಡಳಿಯವರಿಂದ ಭಜನೆ ಕಾರ್ಯಕ್ರಮ, ಮರುಳು ಧೂಮಾವತಿ ದೈವದ ಭಂಡಾರ ಇಳಿಯುವುದು, ದೇವರ ಬಲಿ ಹೊರಟು ಶ್ರೀ ಭೂತಬಲಿ ಉತ್ಸವ, ವಸಂತ ಕಟ್ಟೆಪೂಜೆ, ದರ್ಶನಬಲಿ, ಬಟ್ಟಲುಕಾಣಿಕೆ, ಪ್ರಸಾದ ವಿತರಣೆ ಹಾಗೂ ವೈದಿಕ ಮಂತ್ರಾಕ್ಷತೆ ನಡೆಯಲಿದೆ. ಬಳಿಕ ಶ್ರೀ ಮಹಾವಿಷ್ಣು ಮಕ್ಕಳ ಭಜನಾ ತಂಡದಿಂದ ಕುಣಿತ ಭಜನೆ ನಡೆದು ಮರುಳು ಧೂಮಾವತಿ ದೈವದ ನೇಮೋತ್ಸವ ಜರಗಲಿದೆ.ಸುದ್ದಿ ಯ್ಯೂಟುಬ್ ಚಾನೆಲ್ ನಲ್ಲಿ ನೇಮೋತ್ಸವದ ನೇರಪ್ರಸಾರವನ್ನು ವೀಕ್ಷಿಸಬಹುದು.

ಈ ಸಂದರ್ಭದಲ್ಲಿ ಪವಿತ್ರಪಾಣಿ ಸೂರ್ಯನಾರಾಯಣ ಕುದ್ದಣ್ಣಾಯ, ಅಧ್ಯಕ್ಷ ಬಿ.ವಿ.ಸುಂದರ ನೂರಿತ್ತಾಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮನೋಹರ ಶೆಟ್ಟಿ ಕೊಪ್ಪದಬೆಟ್ಟು, ಉಪಾಧ್ಯಕ್ಷ ಕೃಷ್ಣಪ್ಪ ಪೂಜಾರಿ ಪಂರ್ದಗುತ್ತು, ಕಾರ್ಯದರ್ಶಿ ಪ್ರಶಾಂತ್ ಪೈ, ಉತ್ಸವ ಸಮಿತಿ ಸಂಚಾಲಕ ಚೇತನ್ ಅದಮ್ಮ, ಅರ್ಚಕ ಗುರುಪ್ರಾದ ನೂರಿತ್ತಾಯ ಹಾಗೂ ಆಡಳಿತ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.ಫೆ.8ರಂದು ದೇವರಿಗೆ ಕಾರ್ತಿಕ ಪೂಜೆ ಹಾಗೂ ಭದ್ರಕಾಳಿ ಅಮ್ಮನವರ ನೇಮೋತ್ಸವ ನಡೆಯಲಿದೆ.ಫೆ.9ರಂದು ದೇವರಿಗೆ ಕಾರ್ತಿಕ ಪೂಜೆ, ಅನ್ನಸಂತರ್ಪಣೆ, ನಮ್ಮ ಕಲಾವಿದೆರ್ ಬೆದ್ರ ಇವರಿಂದ ತುಳುನಾಟಕ ಕುಸಾಲ್ದ ಗೊಬ್ಬ ಪ್ರದರ್ಶನಗೊಳ್ಳಲಿದೆ.ಗ್ರಾಮ ದೈವ ಪಂಜುರ್ಲಿ ಮತ್ತು ಕಲ್ಕುಡ ದೈವಗಳ ನೇಮೋತ್ಸವ ನಡೆಯಲಿದೆ.

LEAVE A REPLY

Please enter your comment!
Please enter your name here