ಕುವೆಟ್ಟು ಸ.ಉ.ಪ್ರಾ.ಶಾಲಾ ನೂತನ ಎಸ್.ಡಿ.ಎಂ.ಸಿ ಸಮಿತಿ ರಚನೆ- ಅಧ್ಯಕ್ಷರಾಗಿ ಸಿರಾಜ್ ಚಿಲಿಂಬಿ, ಉಪಾಧ್ಯಕ್ಷರಾಗಿ ಲಾವಣ್ಯ ಶೆಟ್ಟಿ ಅರ್ಕಜೆ

0

ಕುವೆಟ್ಟು: ಸರಕಾರಿ ಉನ್ನತೀಕರಿ‌ಸಿದ ಪ್ರಾಥಮಿಕ ಶಾಲೆ ಕುವೆಟ್ಟು ಇದರ ಶಾಲಾ ನೂತನ ಎಸ್ ಡಿ ಎಂ ಸಿ ಸಮಿತಿ ಜ.30 ರಂದು ರಚನೆಯಾಯಿತು.

ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್ ಶೆಟ್ಟಿ ಹಾಗೂ ಗ್ರಾ.ಪಂ ಸದಸ್ಯರ ಉಪಸ್ಥಿತಿಯಲ್ಲಿ ನೂತನ ಸಮಿತಿ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಜl ಸಿರಾಜ್ ಚಿಲಿಂಬಿ, ಉಪಾಧ್ಯಕ್ಷರಾಗಿ ಲಾವಣ್ಯ ಶೆಟ್ಟಿ ಅರ್ಕಜೆ ಆಯ್ಕೆಯಾದರು.

ಸದಸ್ಯರಾಗಿ ಸಂಜೀವ, ಆನಂದ ನಾಯ್ಕ, ಜl ಇಲ್ಯಾಸ್, ಜl ಸಮೀರ್, ಪ್ರದೀಪ್ ಪಿಂಟೋ, ಶ್ರೀಧರ್ ಕುಲಾಲ್, ಅಚ್ಚುತ ಆಚಾರ್ಯ, ಯೋಗೀಶ್, ಪ್ರೇಮ, ಪ್ರಮೀಳಾ, ಅನಿತಾ ಪಿಂಟೋ, ಕಮರುನ್ನಿಸ, ರುಕಿಯ, ಸಾಹಿದ ಎ., ರೆಹನ, ಸೌಮ್ಯ ಆಯ್ಕೆಯಾದರು.

ಪಂಚಾಯತ್ ಅಧ್ಯಕ್ಷರ ನೇತೃತ್ವದಲ್ಲಿ ಮುಖ್ಯ ಶಿಕ್ಷಕ ಭಾಸ್ಕರ ಆಯ್ಕೆ ಪ್ರಕ್ರಿಯೆ ನಡೆಸಿದರು.ಅಧ್ಯಾಪಕ ವೃಂದದವರು ಸಹಕರಿಸಿದರು.

LEAVE A REPLY

Please enter your comment!
Please enter your name here